ಬೆಳಗಾವಿಯಲ್ಲಿ ಚಿಕನ್ ಪೀಸ್ ಕೇಳಿದ್ದಕ್ಕೆ ಸ್ನೇಹಿತನನ್ನೆ ಕೊಲೆ ಮಾಡಲಾದ ಘಟನೆ ನಡೆದಿದೆ. ಸ್ನೇಹಿತನ ಮದುವೆಯ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ಚಿಕನ್ ಪೀಸ್ ಗಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.ಪಾರ್ಟಿ ಮಾಡುವ ವೇಳೆ ಸ್ನೇಹಿತರಿಬ್ಬರ ನಡುವೆ ಚಿಕನ್ ಪೀಸ್ ಗಾಗಿ ಗಲಾಟೆ ನಡೆದು ಊಟದ ವೇಳೆ ಹೆಚ್ಚು ಪೀಸ್ ಹಾಕು ಅಂದಿದ್ದಕ್ಕೆ ಊಟ ಬಡಿಸುತ್ತಿದ್ದ ಗೆಳೆಯನೇ ಚಾಕು ಇರಿದು ಹತ್ಯೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು ಯರಗಟ್ಟಿ ಪಟ್ಟಣದ ವಿನೋದ್ ಮಲಶೆಟ್ಟಿ (30) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.ಕೆಲ ದಿನಗಳ ಹಿಂದೆ ಅಭಿಷೇಕ್ ಕೊಪ್ಪದ ಮದುವೆಯಾಗಿದ್ದ ತನ್ನ ಜಮೀನಿನಲ್ಲಿ ಸ್ನೇಹಿತರಿಗೆ ಡಿನ್ನರ್ ಪಾರ್ಟಿ ಯನ್ನಅಭಿಷೇಕ್ ಕೊಪ್ಪದ ಅಯೋಜನೆ ಮಾಡಿದ್ದ ಎನ್ನಲಾಗಿದೆ.ಈ ವೇಳೆ ಸ್ನೇಹಿತರಿಗೆ ವಿಠ್ಠಲ್ ಹಾರೂಗೊಪ್ಪ ಚಿಕನ್ ಪೀಸ್ ಬಡಿಸುತ್ತಿದ್ದ ಎನ್ನಲಾಗಿದೆ.ಈ ವೇಳೆ ಪೀಸ್ ಕಡಿಮೆ ಹಾಕಿದಕ್ಕೆ ಹೆಚ್ಚು ಪೀಸ್ ಹಾಕುವಂತೆ ವಿನೋದ್ ಕೇಳಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆ ಶುರುವಾಗಿದೆ ಈರುಳ್ಳಿ ಕಟ್ ಮಾಡಲು ಇಟ್ಟಿದ್ದ ಚಾಕುವಿನಿಂದ ಇರಿದು ವಿನೋದ್ ಕೊಲೆ ಮಾಡಲಾಗಿದೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವಿನೋದ ಮಲಶೆಟ್ಟಿ ಮೃತಪಟ್ಟಿದ್ದಾನೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಬಸರಗಿ, ಮುರಗೋಡ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಬೆಳಗಾವಿಯಲ್ಲಿ ಎಸ್ಪಿ ಡಾ, ಭೀಮಾಶಂಕರ್ ಗುಳೇದ ಮಾತನಾಡಿದ್ದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.