ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಇವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ನೀಡಿದ್ದು ಅದರಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆ, ಯಶಸ್ವಿಯಾಗಿದ್ದೆ. ರಾಜ್ಯದ ಒಟ್ಟು ಜನಸಂಖ್ಯೆ 6 ಕೋಟಿ ಅದರಲ್ಲಿಯ 3.50 ಕೋಟಿ ಮಹಿಳೆಯರಿದ್ದು ಕಳೆದ 20 ತಿಂಗಳದಲ್ಲಿ 500 ಊಟಿ ಮಹಿಳೆಯರು ಬಸವದಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ಸರ್ಕಾರದ ಇದು ಒಂದು ವಿಶೇಷ ಯೋಜನೆ ಎಂದು ಕಾಗವಾಡ ಕ್ಷೇತ್ರ ಶಾಸಕರು ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆ ಅಧ್ಯಕ್ಷ ರಾಜು ಕಾಗೆ ಇವರು ಹೆಮ್ಮೆಯಿಂದ ಹೇಳಿಕೊಂಡರು.
ಸೋಮವಾರ ರಂದು ಕಾಗವಾಡ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆ ಯಶಸ್ವಿಯಾಗಿರುವ ಬಗ್ಗೆ ವಿಶೇಷ ಕಾರ್ಯಕ್ರಮ ಜರುಗಿತು. ಬಸಿಗೆ ಪೂಜೆ ಸಲ್ಲಿಸಿ ಶಾಸಕರು ಮಾತನಾಡುವಾಗ ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಸುಮಾರು 700 ಹೊಸಗಳು ತೆಗೆದುಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸಿಟಿ ಬಸ್ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಅಥಣಿ ಶ್ರವಣಬೆಳಗೊಳ ಮುಂತಾದ ಧಾರ್ಮಿಕ ಸ್ಥಳಗಳಿಗೆ ಬಸ ಸೌಕರ್ಯ ನೀಡಲಾಗಿದೆ. ಅನೇಕ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಸರಕಾರಕ್ಕೆ 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ರೂಪಿಸಿದರಿಂದ ಪ್ರತಿಯೊಬ್ಬರು ಧನ್ಯವಾದ ಸಲ್ಲಿಸುತ್ತಿದ್ದಾರೆ ಎಂದರು.
ಚಿಕ್ಕೋಡಿ ಸಾರಿಗೆ ವಿಭಾಗಿಯ ನಿಯಂತ್ರಕ ಶಶಿಧರ್ ಬಿ ಎಂ ಮಾತನಾಡಿ ಸಾರಿಗೆ ಇಲಾಖೆಯ ಅಧ್ಯಕ್ಷರಾಗಿ ಕಾಗವಾಡ ಶಾಸಕ ರಾಜು ಕಾಗೆ ಇವರು ನಮ್ಮ ವಿಭಾಗದಿಂದ ನೇತೃತ್ವ ಬಯಸುತ್ತಿದ್ದರಿಂದ ಚಿಕ್ಕೋಡಿ ವಿಭಾಗಕ್ಕೆ ಹೆಚ್ಚಿನ ಲಾಭವಾಗಿದೆ ಒಂದು ನೂರುಕ್ಕಿಂತ ಅಧಿಕ ಹೊಸಬಸಗಳ ವ್ಯವಸ್ಥೆ ಮಾಡಲಾಗಿದ್ದು ಪ್ರತಿದಿನ 3.70 ಲಕ್ಷ ಪ್ರಯಾಣಿಕರು ಪ್ರಯಾಣ ಬಳಸುತ್ತಿದ್ದಾರೆ ಇದರಲ್ಲಿ 2.70 ಲಕ್ಷ ಪ್ರಯಾಣಿಕರು ಮಹಿಳೆಯರಾಗಿದ್ದಾರೆ. ಕಳೆದ ವರ್ಷವೂ ಚಿಕ್ಕೋಡಿ ವಿಭಾಗ ಆದಾಯದಲ್ಲಿದ್ದು ಈಗಲೂ ಆದಾಯದಲ್ಲಿ ಇದೆ ಎಂದು ಹೇಳಿದರು.
ಮಹಿಳಾ ಪ್ರಯಾಣಿಕರು ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತಿದ್ದಾರೆ ಅವರು ಶಕ್ತಿ ಯೋಜನೆ ಮುಖಾಂತರ ಪ್ರತಿಯೊಬ್ಬ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ನೀಡಿದರಿಂದ ನಮ್ಮ ಜೀವನದಲ್ಲಿ ಕಾಣದಂತಹ ದೂರಿನ ತೀರ್ಥಕ್ಷೇತ್ರಗಳ ದರ್ಶನ ಮಾಡಿಕೊಂಡಿದ್ದೇವೆ ಅವರಿಗೆ ಜೈನ ಸಮಾಜದ ಜೈ ಜಿನೇಂದ್ರ ಎಂದು ಹೇಳಿದರು.
ಕಾಗವಾಡ ತಾಲೂಕ ಯೂಥ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಮೇಶ್ ಪಾಟೀಲ್ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮತ್ತು ಸಾರಿಗೆ ಇಲಾಖೆಯ ವಲಯ ವಿಭಾಗದ ಅಧ್ಯಕ್ಷ ಶಾಸಕ ರಾಜು ಕಾಗೆ ಇವರ ಪ್ರಯತ್ನದಿಂದ ಸಾರಿಗೆ ಇಲಾಖೆಯ ಎಲ್ಲ ವ್ಯವಸ್ಥೆ ಸರಿಯಾಗಿ ಶಾಲೆಯಲ್ಲಿದ್ದು ಇದರ ಲಾಭ 500 ಕೋಟಿ ಮಹಿಳಾ ಪ್ರಯಾಣಿಕರು ಬಳಿಸಿದ್ದಾರೆ ಇದು ಒಂದು ಪಕ್ಷಕ್ಕೆ ಮತದಾರರು ನೀಡಿರುವ ಆಶೀರ್ವಾದ ಎಂದರು. ಎಲ್ಲ ಯುವಕರು ಕಾಂಗ್ರೆಸ್ ಪಕ್ಷದ ಯೋಜನೆಗಳ ಮಾಹಿತಿ ಮನೆಮನೆಗೆ ಮುಟ್ಟಿಸಬೇಕೆಂದು ಮನವಿ ಮಾಡಿಕೊಂಡರು.
ಸಮಾರಂಭದಲ್ಲಿ ಅಥಣಿ ಡಿಪೋ ಮ್ಯಾನೇಜರ್ ಎನ್ ಎಂ ಕೇರಿ ಅಧಿಕಾರಿಗಳಾದ ಎ ಎಸ್ ಅರಳಿಮಠ, ಎಂ ಎಸ್ ಗುಡನವರ್ ಎಸ್ ಬಿ ಗಸ್ತಿ ಜೆ ಎಲ್ ಕೋಳಿ,
ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಜ್ಯೋತಿಕುಮಾರ್ ಪಾಟೀಲ್, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸೌರಭ ಪಾಟೀಲ್ ರಮೇಶ್ ಚೌಗೂಲೆ, ಸುಭಾಷ್ ಪಾಟೀಲ್, ಪ್ರಕಾಶ್ ಬಡಿಗೇರ್ ಭೀಮು ಅಕಿವಾಟೆ ಮುರುಗೇಶ್ ಕುಂಬಾರ್ ರಾವ್ ಸಾಬ್ ಪಾಟೀಲ್ ಪ್ರಕಾಶ್ ಗಾಣಿಗೇರ, ಪ್ರಕಾಶ್ ಪಾಟೀಲ, ಕಾಂಚನಾಥ್ ಕರವ, ತಾಲೂಕ ಪಂಚಾಯಿತಿ ಅಧಿಕಾರಿ ವೀರಣ್ಣ ವಾಲಿ, ಸಿ ಡಿ ಪಿ ಓ ಸಂಜುಕುಮಾರ ಸದಲಗೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಚೇರಿಯ ಉದ್ಘಾಟನೆ ಶಾಸಕರಾಗಿ ಇವರು ಕಾಗವಾಡದ ಬಸವ ನಗರದಲ್ಲಿ ನೆರವೇರಿಸಿದರು.
ಈ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಜನಾರ್ಧನ್ ದುಂಡಾರೆ ವಿದ್ಯಾಧರ್ ಭಂಡಾರಿ ಅಮಿತ್ ದೀಕ್ಷಾಂತ್ ವಿನಾಯಕ್ ಜೋಗುಲೆ, ಬಾಲಕೃಷ್ಣ ಭಜಂತ್ರಿ, ರಮೇಶ್ ಚೌಗುಲೆ, ಜ್ಯೋತಿ ಕುಮಾರ್ ಪಾಟೀಲ್ ಪ್ರಕಾಶ್ ಪಾಟೀಲ್ ಸೇರದಂತೆ ಅನೇಕರು ಇದ್ದರು.
ಸುಕುಮಾರ್ ಬನ್ನೂರೆ
ಇನ ನ್ಯೂಸ್ ಕಾಗವಾಡ