Bagalkot

ಮಹಾಲಿಂಗಪೂರ ಪಟ್ಟಣ ನೂತನ ತಾಲ್ಲೂಕು ಘೋಷಣೆಗಾಗಿ ಆಗ್ರಹಿಸಿ ಪ್ರತಿಭಟನೆ

Share

ಹೊಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕೆಂದು ತಾಲೂಕು ಹೋರಾಟ ಸಮೀತಿ ಕೈಗೊಂಡಿರುವ ಪ್ರತಿಭಟನೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಬಾಗವಹಿಸಿದ್ದರು

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಾ ಬಂದರು ಹೋರಾಟಕ್ಕೆ ಸ್ಪಂಧಿಸದ ಸರ್ಕಾರ ಹೋರಾಟಗಾರರು ಮಹಾಲಿಂಗಪೂರ ಪಟ್ಡಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು ಸಾರ್ವಜನಿಕರು,

ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರು ಕೆಲವರಿಂದ ಅರೆಬೆತ್ತಲೆಯಾಗಿ ಮೈಮೇಲೆ ತಾಲೂಕು ರಚನೆ ಹೋರಾಟದ ಬರವಣಿಗೆ ಬರೆದುಕೊಂಡು ಪ್ರತಿಭಟಿಸಿದರು ಮಹಾಲಿಂಗಪೂರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು

Tags:

error: Content is protected !!