ನಾವು ಠೇವಣಿದಾರರು ನಮಗೆ ಯಾವುದೇ ಸೈಟ್ ಅಥವಾ ಹೊಲ ಬೇಡ ನಮಗೆ ನಮ್ಮ ದುಡ್ಡು ಬಡ್ಡಿ ಸಮೇತ ಬೇಕೆನ್ನುವ ಬೇಡಿಕೆಯೊಂದಿಗೆ ಉಡಿ ತುಂಬುವ ಸಾಮಗ್ರಿಗಳೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಯಿತು
ಬೆಳಗಾವಿಯಲ್ಲಿ ಸೋಮವಾರ ಜೈ ಹೋ ಜನತಾ ವೇದಿಕೆ ವತಿಯಿಂದ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಠೇವಣಿದಾರರು ಕೈಯಲ್ಲಿ ಸೀರೆ, ಬಳೆ, ಅರಸಿನ, ಕುಂಕಮ, ಟೆಂಗಿನಕಾಯಿಯೊಂದಿಗೆ ಉಡಿ ತುಂಬುವ ಸಾಮಗ್ರಿಗಳೊಂದಿಗೆ ಆಗಮಿಸಿ ಬ್ಯಾಂಕನ ಹಗರಣ ಕುರಿತು 11 ತಿಂಗಳು ಕಳೆದಿದ್ದು, ಗ್ರಾಹಕರು ತನ್ನ ಕಷ್ಟದ ಸಮಯಕ್ಕೆ ಸಹಾಯ ಆಗುವ ನಂಬಿಕೆಯಿಂದ ಈ ಸೊಸೈಟಿ ಯಲ್ಲಿ ದುಡ್ಡು ಡಿಪಾಸಿಟ ಮಾಡಿದ್ದು ಈಗ 1ಕ್ಕೆ 3 ರಷ್ಟು ಬೆಲೆಗೆ ಅಸ್ತಿ ತಗೊಳ್ಳಿ ಅನ್ನುವ ಸನ್ನಿವೇಶ ನಡೆದಿದ್ದು ನಾವು ಠೇವಣಿದಾರರು ನಮಗೆ ಯಾವುದೇ ಸೈಟ್ ಅಥವಾ ಹೊಲ ಬೇಡ ನಮಗೆ ನಮ್ಮ ದುಡ್ಡು ಬಡ್ಡಿ ಸಮೇತಬೇಕೆಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಸೊಸಾಯಿಟಿಯಲ್ಲಿ ಹಣ ಠೇವಣಿ ಇಟ್ಟು ವಂಚಣೆಗೊಳಗಾಗಲು ಫೇಡರೇಶನ್ ಕಾರಣ 2022ರಲ್ಲಿ ಐಟಿ ದಾಳಿಯಾದಾಗ ಸ್ವಲ್ಪ ಸಮಸ್ಯೆಯಿದೆ ಹಣ ಸುರಕ್ಷೀತವಾಗಿದೆ ಯಾರೂ ವಾಪಸ್ಸು ಪಡೆಯಬೇಡಿ ಎಂದಿತ್ತು ಈಗ ಏನಾಗಿದೆ ವಂಚನೆಗೊಳಗಾದ ಜನರಿಗೆ ಅವರ ಠೇವಣಿ ಹಣದ ಬದಲಾಗಿ ಸೈಟ್ ಕೊಡುತ್ತೇವೆ ಎನ್ನುತ್ತಿದ್ದಾರೆ ಇಲ್ಲಿ ಹಣ ಠೇವಣಿ ಇಡಬೇಡಿ ಎಂದು ಜನತೆಗೆ ಜಾಗೃತಿ ಮೂಡಿಸಬೇಕಿತ್ತು ಕಟ್ಟ ಕಡೆಯ ಠೇವಣಿದಾರರಿಗೆ ಹಣ ವಾಪಸ್ಸು ನೀಡಲು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದರು
ಬ್ಯಾಂಕಿನ ಠೇವಣಿಯಿಟ್ಟ ಮಹಿಳಾ ಗ್ರಾಹಕಿ ಮಾತನಾಡಿ ನಮ್ಮ ಠೇವಣಿದಾರರಲ್ಲಿ ಶೇ 80-90 ರಷ್ಟು ನಿವೃತ್ತಿಯಾದವರು, 70-80 ವರ್ಷ ಮೇಲ್ಪಟ್ಟವರು ಎಲ್ಲರಿಗೂ ಪಿಂಚಣಿ ಬರುವುದಿಲ್ಲ ಎರಡು ಕಾಸು ಹೆಚ್ಚಿಗೆ ಬರುತ್ತದೆ ನಮ್ಮ ಜೀವನದಲ್ಲಿ ಅನುಕೂಲವಾಗುತ್ತದೆ ಎಂದು ನಂಭಿಕೆಯಿಟ್ಟು ನಮ್ಮ ನಿವೃತ್ತಿಯ ನಂತರ ಬಂದ ಪಿಎಪ್, ಇನ್ನಿತರ ಹಣವನ್ನು ಠೇವಣಿ ಇಡಲಾಗಿತ್ತು ಎಂದರು