Bagalkot

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಬೆಚ್ಚಿ ಬೀಳಿಸ್ತಿದೆ ಈ ಡೆಡ್ಲಿ ಎಕ್ಸಿಡೆಂಟ್ ರಸ್ತೆ

Share

ಬಾಣಂತಿಕೊಳ್ಳ ಎಂಬ ಹೆಸರಿನ ಅಪಾಯಕಾರಿ ತಿರುವು ರಸ್ತೆ ಬಗ್ಗೆ ಪ್ರಯಾಣಿಕರಿಗೆ ಈಗಲೂ ಭಯ ಅಂದಾಜಿನ ಪ್ರಕಾರ ಪ್ರತಿ ತಿಂಗಳು ಎರಡರಿಂದ ಮೂರು, ವರ್ಷಕ್ಕೆ 15 ರಿಂದ 20 ಎಕ್ಸಿಡೆಂಟ್ ಗಳು ಇಲ್ಲಿ ಫಿಕ್ಸ್ ಒಂದೆಡೆ ಅವೈಜ್ಞಾನಿಕ ರಸ್ತೆ ನಿರ್ಮಾಣ ಎಂಬ ಭಯ, ಮತ್ತೊಂದೆಡೆ ಬಾಣಂತಿ ಸಾವಿನ ಕಾಟದ ವದಂತಿ ಅನ್ನೋ ಭಯ ಈ ಕುರಿತು ವರದಿ ಇಲ್ಲಿದೆ ನೋಡಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ ಪಟ್ಟಣದ ಹೊರ ವಲಯದಲ್ಲಿ ಬರೋ ಬಾಣಂತಿ ಕೊಳ್ಳದ ಬಳಿಯ ತಿರುವಿನ ರಸ್ತೆ ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿಯಲ್ಲೊಂದು ಡೆಡ್ಲಿ ಎಕ್ಸಿಡೆಂಟ್ ಹಾರ್ಟ ಸ್ಪಾಟ್ ಎದುರು ಬರುವ ವಾಹನ ಕಾಣದ ರೀತಿ ತಗ್ಗು ಜೊತೆಗೆ ತಿರುವುನಿಂದ ಕೂಡಿದ ರಸ್ತೆ ಏರಿಕೆಯ ತಿರುವಿನಲ್ಲಿ ಎದುರಾಗುವ ವಾಹನಗಳು ಕಾಣದೇ ಆಗಿರೋ ಅದೆಷ್ಟೋ ಅಪಘಾತಗಳು ಅವೈಜ್ಞಾನಿಕ ರಸ್ತೆ ತಿರುವಿನಿಂದ ಅಪಘಾತ ಹೆಚ್ಚುತ್ತಿವೆಯಾ ಅಥವಾ ಬಾಣಂತಿ ಶಾಪದಿಂದ ಅಪಘಾತ ಹೆಚ್ಚಾಗಿವೆಯಾ ಬಾಣಂತಿ ಕೊಳ್ಳದ ತಿರುವಿನ ಹಿಂದೆ ಇದೆ ಇಂಟರಸ್ಟಿಂಗ್ ಕಹಾನಿ 40 ವರ್ಷಗಳಿಂದೆ ಇದೇ ರಸ್ತೆಯಲ್ಲಿ ಬಾಣಂತಿ ನೀರಿಗಾಗಿ ಪರದಾಟ ನೀರು ಸಿಗದೇ ನರಳಾಡಿ ಸಾವು ಆಕೆಯ ಶಾಪದಿಂದ ಅಪಘಾತವಾಗ್ತಿವೆಯಾ ಬಾಣಂತಿ ಆತ್ಮವಾಗಿ ಕಾಡುತ್ತಿದ್ದಾಳಾ ಅಂತ ಜನರಲ್ಲಿ ವದಂತಿ ಬಾಣಂತಿ ಕೊಳ್ಳ ರಸ್ತೆ ಬಗ್ಗೆ ಸುತ್ತಮುತ್ತಲಿನ ಜನರಿಂದ ವಿವಿಧ ರೀತಿ ನಂಬಿಕೆ ಅಮೀನಗಢ ಪಟ್ಟಣದ ಬಳಿಯ ಅಪಾಯಕಾರಿ ರಸ್ತೆಯಲ್ಲಿ ಪ್ರತಿ ತಿಂಗಳ ಸರಾಸರಿ 2 ರಿಂದ 3 ಅಪಘಾತಗಳು ಫಿಕ್ಷ್. ಪ್ರತಿಯೊಬ್ಬರಿಗೂ ಭಯ ಹುಟ್ಟಿಸಿರುವ ರಸ್ತೆ
ಅವೈಜ್ಞಾನಿಕ ರಸ್ತೆ ಸರಿಪಡಿಸಿ, ಮೂಢನಂಬಿಕೆ ದೂರ ಮಾಡಿ ಎಂದು ಸ್ಥಳೀಯರ ಒತ್ತಾಯ

ಸ್ಥಳೀಯ ನಿವಾಸಿ ಥಮುತ್ತಪ್ಪ ಯಮನಪ್ಪ ಮುಂದಿನಮನಿ ಮಾತನಾಡಿ ಈಗ ಬೋರವೆಲ್ ಎಲ್ಲ ಬೇಕಾದರೂ ಇವೆ ಹಿಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಹಳಿತ್ತು ಹೋಳಿಗೆ ಹೋಗಿ ತರಬೇಕು ಇಲ್ಲವಾದಲ್ಲಿ ಅಮಿನಗಡಕ್ಕೆ ತೆರಳಿ ನೀರು ತರುವ ಪರಿಸ್ಥಿತಿಯಿತ್ತು ಅಂತಾ ಸಮಯದಲ್ಲಿ ಬಾಣಂತಿಯೊಬ್ಬಳು ಇಲ್ಲಿ ಸಾವನಪ್ಪಿದ್ದಾಳೆ ಅದಕ್ಕೆ ಬಾಣಂತಿಕೊಳ್ಳ ಎಂದು ಕರೆಯುತ್ತೆವೆ ಇಂದಿನ ಜನರಿಗೆ ಅವಸರ ಬಹಳಷ್ಟಿದೆ ನಿದಾನ ಎನ್ನುವುದು ಇಲ್ಲ ಹಿಂಗಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಲೆಕ್ಕವಿಲ್ಲ ನಾನು ಸಣ್ಣವನಿದ್ದಾಗ ಸೇತುವೆ ಕೇಳಗೆ ಗಾಡಿ ಬಿದ್ದು 6 ಜನ ಇತ್ತಿಚೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬಿದ್ದು 4 ಜನ ಸಾವನಪ್ಪಿದ್ದಾರೆ ರಸ್ತೆ ಅಗಲೀಕರಣ ಮಾಡಬೇಕು ಇಲ್ಲವಾದರೆ ರೋಡ್ ಬ್ರೇಕ್ ಹಾಕಿದರೆ ಒಳ್ಳೆಯದು ಎಂದರು..

Tags:

error: Content is protected !!