ರಾಜ್ಯದಲ್ಲಿ ದ್ವೀಭಾಷಾ ಶಿಕ್ಷಣ ನೀತಿಯನ್ನು ಕೈಬಿಟ್ಟು ತ್ರೀಭಾಷಾ ಸೂತ್ರವನ್ನು ಯಥಾವತ್ತಾಗಿ ಮುಂದುವರೆಸುವಂತೆ ಕರ್ನಾಟಕ ರಾಜ್ಯ ಹಿಂದಿ ಪ್ರೌಢಶಾಲಾ ಶಿಕ್ಷಕರ ಸಭಾಪತಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸರ್ಕಾರ ದ್ವೀಬಾಷಾ ಶಿಕ್ಷಣ ನೀತಿಯನ್ನು ಜಾರಿಗೆ ಮುಂದಾಗಿರುವುದಕ್ಕೆ ಹಿಂದಿ ಭಾಷಾ ಶಿಕ್ಷಕರು ಅಡ್ಡ ಕತ್ತರಿಯಲ್ಲಿ ಉಳಿಯುವಂತಾಗುತ್ತದೆ ಕರ್ನಾಟಕ ಸರ್ಕಾರವು ದ್ವಿ ಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಯೋಚಿಸುತ್ತಿದ್ದು ಇದನ್ನು ಕೈ ಬಿಟ್ಟು ತ್ರೀ ಭಾಷಾ ಸೂತ್ರವನ್ನು ಯಥಾವತ್ತಾಗಿ ಮುಂದೆವರಿಸಲು ಕರ್ನಾಟಕ ರಾಜ್ಯ ಹಿಂದಿ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಭಾನುವಾರ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ತನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಹಾವೇರಿ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 500 ಕ್ಕೂ ಹೆಚ್ಚಿನ ಹಿಂದಿ ಶಿಕ್ಷಕರು ಹಾಜರಿದ್ದರು.