ಸಿಎಂ, ಡಿಸಿಎಂ ಅವರೇ ಪರಸ್ಪರ ವ್ಯಾಪಾರ ಮಾಡೋಕೆ ಶುರು ಮಾಡಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇಲ್ಲಾ ಅಂದಿದ್ದಾರೆ. ಇಬ್ಬರು ತಮ್ಮ ಬಳಿ ಇದ್ದಂತ ದುಡ್ಡಿನ ಪವರ್ ತೋರಿಸ್ತಾ ಇದ್ದಾರೆ. ಕೊಳ್ಳುವವರಿಬ್ಬರೂ ಬಲಾಢ್ಯರಿದ್ದಾರೆ. ಅವರೇ ಒಬ್ಬರೋಗೊಬ್ಬರು ಕಾದಾಟ ನಡೆಸಿದ್ದಾರೆ. ವ್ಯಾಪಾರ ಆಗಲು ಕುದುರೆಗಳು ತಯಾರಿವೆ,
ಆ ವ್ಯಾಪಾರದಲ್ಲಿ ಬಿಜೆಪಿ ಬಿಳ್ಳೋದಿಲ್ಲ ಎಂದರು. 2019ರಲ್ಲಿ ನಾವು ಮಾಡಿದ್ದು ನಮ್ಮಲ್ಲಿ ಜಾಸ್ತಿ ಇತ್ತು ಮಾಡಿದ್ವಿ, ಆಡಳಿತ ಸರಿಯಾಗಿ ಮಾಡಬೇಕು,
ಕಾಂಗ್ರೆಸ್ ಹೈಕಮಾಂಡ್ ಕಂಟ್ರೋಲ್ ತಪ್ಪುತ್ತೆ
ಹೆಚ್ಚು ಶಾಸಕರನ್ನ ತೋರಿಸಿದವರು ಸಿಎಂ ಆಗಬಹುದು ಅನ್ನೋದಕ್ಕೆ ಇವರು ಮಾಡ್ತಿದ್ದಾರೆ. ನಾವು ಅದರಲ್ಲಿ ಬಿದ್ದಿಲ್ಲ, ಸುಳ್ಳು ಆರೋಪ ಮಾಡ್ತಾ ಇದ್ದಾರೆ. ಅವರ ನ್ಯೂನ್ಯತೆಗಳನ್ನ ಎತ್ತಿ ಹಿಡಿದು ಹೋರಾಟ ನಡೆಸಲು ನಾನು ಸೂಚನೆ ನೀಡಿದ್ದೇನೆ ಎಂದರು.
hubbali
ಸಿಎಂ ಆಗಲು ಶಾಸಕರ ವ್ಯಾಪಾರ ಜೋರಾಗಿ ನಡೆದಿದೆ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ
