Bagalkot

ಬಾಗಲಕೋಟೆಯಲ್ಲಿ ನಿಲ್ಲದ ಪಡಿತರ ಅಕ್ಕಿ ಅಕ್ರಮ ಸಾಗಾಟ ದಂಧೆ ಪ್ರಕರಣಗಳು

Share

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ರವಾಣಿಸುವಾಗ ಸಿಕ್ಕಾಕಿಕೊಂಡು ಇಬ್ಬರು ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ದಂಧೆ ಪ್ರಕರಣಗಳು ಹೆಚ್ಚಾಗುತ್ತಿವೆ ರಿಜಿಸ್ಟ್ರೇಶನ್ ನಂಬರ್ ಇಲ್ಲದ ವಾಹನಗಳಲ್ಲಿ ಸಾಗಾಟ ಮಾಡುತ್ತಿರುವಾಗ ಒಂದು ಲಾರಿ ಹಾಗೂ ಒಂದು ಅಶೋಕ್ ಮಿನಿ ಲೈಲೆಂಡ್ ವಾಹನವನ್ನು ಮಹಾಲಿಂಗಪುರ ಠಾಣೆಯ ಪೊಲೀಸರು ಜಪ್ತ ಮಾಡಿಕೊಂಡು ಚಾಲಕ ಮಲ್ಲಪ್ಪ ಅಥಣಿ, ಗಡಿಪಾರಾಗಿದ್ದ ಅಕ್ರಮ ಅಕ್ಕಿ ದಂಧೆಯ ರೂವಾರಿ ರಾಘವೇಂದ್ರ ತೇಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಾಘವೇಂದ್ರ ತೇಲಿ ಮೇಲೆ ಈ ಹಿಂದೆ 7ರಿಂದ 8 ಪ್ರಕರಣಗಳು ದಾಖಲಾಗಿವೆ ನ್ಯಾಯಾಲಯ ಏಳು ವರ್ಷ ಶಿಕ್ಷೆ ವಿಧಿಸಿದೆ .ಈತ ಬೇಲ್ ಮೇಲೆ ಹೊರಗಡೆ ಇದ್ದಾನೆ.

ಮಾನ್ಯ ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಈತ ಪದೇ ಪದೇ ಅಪರಾಧ ಮಾಡುತ್ತಿದ್ದಾನೆ ಎಂದು ಮನವಿ ಮಾಡ್ತೇವೆ. ಈತನ ಹೊರಗಡೆ ಬಿಡಬಾರದು ಈ ಹಿಂದಿನ ಬೇಲ್ ನಲ್ಲಿ ಪ್ರಕರಣ ದಾಖಲಾಗಿದ್ದಾವೂ ಅವುಗಳನ್ನು ಕ್ಯಾನ್ಸಲ್ ಮಾಡಿಸಿತೇವೆ. ಈತನ ಮೇಲೆ ಗೂಂಡಾ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡ್ತೀವೆ ಎಂದು ಬಾಗಲಕೋಟೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದಾರೆ.

Tags:

error: Content is protected !!