ಬೆಳಗಾವಿ: ಇಲ್ಲಿನ ಆಂಜನೇಯ ನಗರದಲ್ಲಿ ಶ್ರೀ ಅಂಜನಾ ಮಹಿಳಾ ಮಂಡಳ ವತಿಯಿಂದ “ಗುರುಪೌರ್ಣಿಮಾ ” ನಿಮಿತ್ಯ ಗುರುವಂದನಾ ಹಾಗೂ ಸ.ಕ.ಹಿ. ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ , ಬ್ಯಾಗ್ ಹಾಗೂ ಪೆನ್ನು, ಪೇನ್ಸಿಲ್ ವಿತರಿಸಲಾಯಿತು. ಬಳಿಕ, ಶ್ರೀ ಅಂಜನಾ ಮಹಿಳಾ ಮಂಡಳದಿಂದ ಸಸಿ ನೇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಎಲ್ಲರೂ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆದು ಶಾಲೆಯ ಘನತೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಪೋಷಕರು ಅವಿರತವಾಗಿ ಶ್ರಮಿಸಿ ವಿದ್ಯಾರ್ಥಿಗಳ ಯಶಸ್ಸಿಗೆ ಪಣತೊಡಬೇಕೆಂದು ತಿಳಿಸಿದರು.
ಗುರುವನ್ನು ನಮಿಸುಕ ಗುರುವಿಗೆ ನಿತ್ಯವೂ ಗೌರವ ಸಲ್ಲಿಸಿದಾಗ ಮಾತ್ರ ಗುರುವಂದನಾ ದಿನ ಅರ್ಥಪೂರ್ಣವಾಗಲಿದೆ. ಶಿಷ್ಯನಲ್ಲಿರುವ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನೆಡೆಗೆ ಕರೆದೊಯ್ಯುವವರೇ ಗುರು. ಈ ಗುರುಗಳು ಉಣಬಡಿಸಿದ ಶಿಕ್ಷಣದಿಂದ ನಾವಿಂದೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗಿದೆ. ಹೀಗಾಗಿ ಗುರುಗಳನ್ನು ನಿತ್ಯವೂ ಗೌರವಿಸೋಣ ಎಂದರು.ನಮಗೆ ಮನೆಯೇ ಮೊದಲ ಪಾಠಶಾಶೆ ತಾಯಿಯೇ ಮೊದಲ ಗುರು ಅವರಿಗೆ ನಾವು ದಿನವು ನಮಿಸಬೇಕು ಎಂದು ಅಧ್ಯಕ್ಷರು ಹೇಳಿದ್ರು
ಸತ್ಯ, ಒಳ್ಳೆಯತನ, ಪ್ರೀತಿ ಪ್ರಾಮಾಣಿಕತನ ಇನ್ನೂ ಉಳಿದಿದೆ ಎಂದರೆ ಅದು ಗುರುಗಳು ಕಲಿಸಿದ ಶಿಕ್ಷಣವೇ ಸಾಕ್ಷಿ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಯಬೇಕಾಗಿದೆ. ಗುರುವನ್ನು ನೆನೆಯುವುದು ಭಾರತೀಯ ಸಂಸ್ಕೃತಿ ಆಗಿದೆ, ಗುರುಗಳನ್ನು ಮರೆತರೆ ಸಂಸ್ಕೃತಿಯನ್ನೇ ಮರೆತಂತೆ ಎಂದು ತಿಳಿಸಿದರು.
ಈ ವೇಳೆ ಶ್ರೀ ಅಂಜನಾ ಮಹಿಳಾ ಮಂಡಳದಿಂದ ಶಾಲೆಯ ಪ್ರಧಾನ ಗುರುಮಾತೆಯರಾದ ಭಾರತಿ ಅವ್ವಕ್ಕನವರ ಹಾಗೂ ಸಹಶಿಕ್ಷಕಿಯರಾದ ಶಾಂತಕುಮಾರಿ ಬೋಗಾರ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭಾಗ್ಯಶ್ರೀ ಬೈರಪ್ಪನವರ ಸಹ ಕಾರ್ಯದರ್ಶಿ ಪ್ರಭಾ ಪಾಟೀಲ, ಜಯಶ್ರೀ ದುಗ್ಗಾಣಿ, ಪ್ರಭಾ ಹಾದಿಮನಿ, ಸರೋಜಾ ಇರಕಲ, ಶಾಲಾ ಮಕ್ಕಳು ಪ್ರಾರ್ಥಿಸಿದರು. ಗೀತಾ, ಕಾವೇರಿ ಸ್ವಾಗತಿಸಿದರು. ಉಪಾಧ್ಯಕ್ಷೇ ಲಲಿತಾ ಹೂಗಾರ ವಂದಿಸಿದರು.