ಚಿಕ್ಕೋಡಿ: ಕನ್ನಡ ನೆಲದಲ್ಲೇ ಕನ್ನಡ ಕಾರ್ಮಿಕರ ಮೇಲೆ ಮರಾಠಿ ಮ್ಯಾನೇಜರ್ ನಿಂದ ದರ್ಪ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಟೋಲ್ ಸಂಗ್ರಹದಲ್ಲಿ ನಡೆದಿದೆ.
ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಮೇಲಿರುವ ನಿರ್ಮಾಣವಾಗಿರುವ ಟೋಲ್ ಪ್ಲಾಜಾ.ಮಹಾರಾಷ್ಟ್ರ ಮೂಲದವರಿಂದ ಗುತ್ತಿಗೆ ಆಧಾರದ ಮೇಲೆ ಟೋಲ್ ಸಂಗ್ರಹ ಕೇಂದ್ರ ಇದೆ.ಹತ್ತು ಸಾವಿರ ಸಂಬಳಕ್ಕೆ ಕಾರ್ಮಿಕರು ದುಡಿಯುತ್ತಾರೆ.
ರಾತ್ರಿ ಹೊತ್ತು ಸ್ವಲ್ಪ ನಿದ್ದೆಗೆ ಜಾತಿದ್ರೆ 2 ಸಾವಿರ ಸಂಬಳ ಕಡಿತವಂತೆ.ಈ ಕಾರಣಕ್ಕಾಗಿ ಮಹಾರಾಷ್ಟ್ರದ ಮೂಲದ ಮ್ಯಾನೇಜರ್ ಪ್ರತಿ ತಿಂಗಳು 2 ಸಾವಿರ ಸಂಬಳ ಕಡಿತ ಮಾಡಿಕೊಳ್ಳುತ್ತಿದ್ದಾನೆ.ಅದಲ್ಲದೇ ನಿಮ್ಮನ್ನು ಕೆಲಸದಿಂದ ತೆಗೆದು ಮಹಾರಾಷ್ಟ್ರದವರನ್ನು ನೇಮಿಸುತ್ತೇನೆ ಎಂದು ಕನ್ನಡ ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿದ್ದಾನೆ.
ರೊಚ್ಚಿಗೆದ್ದ ಕನ್ನಡದ ಕಾರ್ಮಿಕರು ಟೋಲ್ ಪ್ಲಾಜಾ ಮ್ಯಾನೇಜರ್ ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡಪರ ಹೋರಾಟಗಾರರಿಂದ ಮರಾಠಿ ಮ್ಯಾನೇಜರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.