ಬೆಳಗಾವಿ: ಹಿಂದವಾಡಿ ಗಣೇಶ ರಸ್ತೆ ಬಳಿಯ ಪ್ರತಿಷ್ಠಿತ ನಾಗರಿಕರು ಹಾಗೂ ಮಾಜಿ ಮಹಾರಾಷ್ಟ್ರ ವಿದ್ಯುತ್ ಮಂಡಳಿಯ ಎಂಜಿನಿಯರ್ ಅನಂತರಾವ ರಘುನಾಥರಾವ್ ಬಿರ್ಜೆ ಅವರ ಪತ್ನಿ ಸುನಂದಾ ಅನಂತರಾವ್ ಬಿರ್ಜೆ (ವಯಸ್ಸು ೮೩) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಬೆಳಗಾವಿಯ ಖ್ಯಾತ ಇಂಜಿನಿಯರ್ ಬಾಲಚಂದ್ರ ಬಿರ್ಜೆ ಅವರ ತಾಯಿಯಾಗಿದ್ದು ಸೊಸೆ, ಮಗಳು, ಅಳಿಯ ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸುನಂದಾ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ೯ ಗಂಟೆಗೆ ಶಹಾಪುರ ಶ್ಮಶಾನದಲ್ಲಿ ನಡೆಯಲಿದೆ.