ಬಾಗಲಕೋಟೆಯ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಸಿಬ್ಬಂದಿಗಳಿರದೇ ಬಣಗುಡುತ್ತಿದ್ದು, ಸಾರ್ವಜನಿಕ ಸೇವೆ ಸಿಗದೇ, ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
- ಬಾಗಲಕೋಟೆಯ ನವನಗರದಲ್ಲಿರುವ ಸೆಕ್ಟರ್ ನಂ.7 ರ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಸಿಬ್ಬಂದಿಗಳಿಲ್ಲದೇ ಬಣಗುಡುತ್ತಿದೆ. ಬೆಳಿಗ್ಗೆ 11.15 ಗಂಟೆಯಾದರೂ ಕಚೇರಿಯಲ್ಲಿ ಯಾರೂ ಸಿಬ್ಬಂದಿ ಬಂದಿಲ್ಲ. ಕಚೇರಿ ಬಾಗಿಲು ತೆರೆದು ಇದ್ದರೂ ಒಳಗೆ ಕೆಲಸ ನಡೆಯುತ್ತಿದೆಯೆಂಬ ಸುಳಿವು ಕೂಡಿಲ್ಲ. ಕಚೇರಿಯಲ್ಲಿ ಕೇವಲ ಒಬ್ಬ ಎಸ್ಡಿಎ ಸಿಬ್ಬಂದಿ ಮಾತ್ರ ಕಾಣಸಿಕ್ಕಿದ್ದಾರೆ. ಮುಖ್ಯ ಪ್ರಾದೇಶಿಕ ಅಧಿಕಾರಿ ಅನಿಲಮಾರ್ ತಳಗೇರಿಯ ಚೇಂಬರ್ ಕೂಡಾ ಖಾಲಿಯೇ ಇತ್ತು. ಅಧಿಕಾರಿಗೆ ಫೋನ್ ಮಾಡಿದಾಗ ಅವರು ‘ಇನ್ಸ್ಪೆಕ್ಷನ್ಗೆ ಹೋಗಿದ್ದಾರೆಂಬ ಸಬೂಬು ಸಿಕ್ಕಿದೆ. ಸಾರ್ವಜನಿಕರಿಗೆ ಸೇವೆ ನೀಡಬೇಕಾದ ಕಚೇರಿಯ ಈ ರೀತಿ ಸ್ಥಿತಿ ಕಾರ್ಯವೈಖರಿಯ ಕುರಿತು ಹಲವಾರು ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.