Belagavi

ವಿಶೇಷಚೇತನರ ಏಳ್ಗೆಗೆ ರೆಡ್ ಕ್ರಾಸ್’ನಿಂದ ಹಲವು ಉಪಕ್ರಮ; ರಾಜ್ಯ ಉಪಾಧ್ಯಕ್ಷ ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್

Share

ವಿಶೇಷಚೇತನರ ಏಳ್ಗೆಗಾಗಿ ರೆಡ್ ಕ್ರಾಸ್’ನಿಂದ ಹೊಸ ಹೊಸ ಉಪಕ್ರಮಗಳನ್ನು ಮಾಡಲಾಗುವುದು ಎಂದು ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.

ಬೆಳಗಾವಿಯ ವಿಶೇಷಚೇತನರ ಪುರ್ನವಸತಿ ಕೇಂದ್ರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ನೂತನ ಕಮೀಟಿಯ ಸ್ಥಾಪನೆ, ಹೊಸ ಹೊಸ ಉಪಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಯಿತು.
ಬೆಳಗಾವಿಯಲ್ಲಿರುವುದು ಅತ್ಯಂತ ಹಳೆಯ ಸಂಸ್ಥೆಯಾಗಿದೆ. ಜಿಲ್ಲಾಧಿಕಾರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯತ್ ಸಿ.ಇ.ಓ ಚೇರಮನ್ ಆಗಿದ್ದಾರೆ. ರಾಜ್ಯ ಮಟ್ಟದಲ್ಲಿ ಜ್ಯುನಿಯರ್ ರೆಡ್ ಕ್ರಾಸ್, ಯೂಥ್ ರೆಡ್ ಕ್ರಾಸ್, ಫಸ್ಟ್ ಎಡ್ ಟ್ರೇನಿಂಗ್, ಆಪತ್ತು ನಿರ್ವಹಣೆ, ಸಿವ್ಹಿಲ್ ಡಿಫೇನ್ಸ್ ಇನ್ನುಳಿದ ಉಪಕ್ರಮಗಳನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ.

ಈಗಾಗಲೇ ಇಲ್ಲಿ ರೆಡ್ ಕ್ರಾಸ್ ಭವನವನ್ನು ನಿರ್ಮಿಸಲಾಗಿದೆ. ಜನರಿಗೆ ವಿಶೇಷವಾಗಿ ಮಾತನಾಡಗದ ದಿವ್ಯಾಂಗರಿಗೆ ಮತ್ತು ಚಿಕ್ಕಮಕ್ಕಳಿಗೆ ತರಬೇತಿಯನ್ನು ಆಯೋಜಿಸಲಾಗುವುದು. ಚುನಾವಣೆಯ ಬಳಿಕ ಹೊಸ ಕಮೀಟಿ ರಚನೆಯಾದ ಬಳಿಕ, ಬ್ಲಡ್ ಬ್ಯಾಂಕ್, ಪ್ರಾಣಿಗಳ ರಕ್ಷಣೆ ಸೇರಿದಂತೆ ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳುವ ಉದ್ಧೇಶವಿದೆ ಎಂದು ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ನಿರ್ವಹಣಾ ಸಮಿತಿಯ ಸದಸ್ಯ ವಿಕಾಸ್ ಕಲಘಟಗಿ, ಪ್ರಿಯಾ ಪುರಾಣಿಕ್, ಅಶೋಕ ಬದಾಮಿ, ದತ್ತಾತ್ರೈಯ ಮಿಸಾಳೆ, ಮೂಲಿಮನಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!