BELAGAVI

ರೋಹಿಣಿ ಪಾಟೀಲ್’ಗೆ ಏಷ್ಯನ್ ಜೂಡೋ ಕಪ್ 2025 ಕೋಚ್‌ ಪದವಿ

Share

ಜುಲೈ 13ರಿಂದ 17ರವರೆಗೆ ತೈವಾನ್‌ನ ತೈಪೆನಲ್ಲಿ ನಡೆಯಲಿರುವ ಏಷ್ಯನ್ ಜೂಡೋ ಕಪ್ 2025 ಕಿರಿಯರ ಟೂರ್ನಿಗೆ ಭಾರತೀಯ ಮಹಿಳಾ ಜೂಡೋ ತಂಡದ ಕೋಚ್ ಆಗಿ ಬೆಳಗಾವಿಯ ರೋಹಿಣಿ ಪಾಟೀಲ ನೇಮಕಗೊಂಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಯ ಬೆಳಗಾವಿ ಇಂಡೋರ್ ಹಾಲ್‌ನಲ್ಲಿ 100ಕ್ಕೂ ಹೆಚ್ಚು ಜೂಡೋ ಪಟುಗಳಿಗೆ ತರಬೇತಿ ನೀಡುತ್ತಿರುವ ರೋಹಿಣಿ , ನ್ಯಾಷನಲ್ ಗೇಮ್ಸ್ ಹಾಗೂ ಹಿರಿಯ-ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ವರ್ಣ ಪದಕಗ ಮತ್ತು ಹಲವಾರು ಬಾರಿ ರಾಜ್ಯಮಟ್ಟದ ಚಾಂಪಿಯನ್, ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಅವರು ಭಾರತೀಯ ಜೂಡೋ ಫೆಡರೇಷನ್ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು 2ನೇ ಡಾನ್ ಬ್ಲಾಕ್ ಬೆಲ್ಟ್ ಪಡೆದಿದ್ದು, ‘A’ ಗ್ರೇಡ್ ರಾಷ್ಟ್ರೀಯ ರೆಫರಿಯಾಗಿ ಮಾನ್ಯತೆ ಹೊಂದಿದ್ದಾರೆ. ಈ ಸಾಧನೆಯ ಹಿಂದೆ DYES ಉಪನಿರ್ದೇಶಕ ಶ್ರಿನಿವಾಸ್ ಬಿ. ಅವರ ನಿರಂತರ ಸಹಕಾರವೂ ಮುಖ್ಯವಾಗಿದೆ. ರಾಷ್ಟ್ರಕ್ಕೆ ಚಾಂಪಿಯನ್‌ಗಳನ್ನು ತಯಾರಿಸುತ್ತಿರುವ ಕೋಚ್ ರೋಹಿಣಿ ಪಾಟೀಲ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

Tags:

error: Content is protected !!