ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರು ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದ್ದು, ಅದೇ ರೀತಿ ಧಾರವಾಡದ ಪಾಲಿಕೆ ಕಚೇರಿ ಎದುರು ನೌಕರರು ಧರಣಿ ನಡೆಸಿದರು.
7ನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಮಹಾನಗರ ಪಾಲಿಕೆ ಅಧಿಕಾರಿ ನೌಕರರಿಗೂ ಯಥಾವತ್ತಾಗಿ ವಿಸ್ತರಿಸಿ, ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ರಾಜ್ಯ ಹಣಕಾಸು ಆಯೋಗ ನೀಡುವ ವೇತನದ ಅನುದಾನದಿಂದಲೇ ಶೇ.100 ರಷ್ಟು ಅನುದಾನ ಬಿಡುಗಡೆ ಮಾಡಬೇಕು. ಕರ್ನಾಟಕ ಮಹಾನಗರ ಪಾಲಿಕೆಗಳು ಸಾಮಾನ್ಯ ನೇಮಕಾತಿ ನಿಯಮಗಳನ್ನು 2011ಕ್ಕೆ ಸಮಗ್ರ ತಿದ್ದುಪಡಿ ಮಾಡಿ ಶೀಘ್ರವಾಗಿ ಕರಡು ಅಧಿಸೂಚನೆ ಪ್ರಕಟಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ಸದ್ಯ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೌಕರರು ಧರಣಿ ನಡೆಸಿದ್ದು, ಸರ್ಕಾರ ರಾಜ್ಯಮಟ್ಟದ ನೌಕರರೊಂದಿಗೆ ಮಾತುಕತೆ ನಡೆಸಲು ಸಭೆ ಕರೆದಿದ್ದು, ಸಭೆ ಯಶಸ್ವಿಯಾದಲ್ಲಿ ನೌಕರರು ಧರಣಿ ಕೈಬಿಡಲಿದ್ದಾರೆ. ಸಭೆ ಯಶಸ್ವಿಯಾಗದೇ ಹೋದರೆ ನೌಕರರ ಧರಣಿ ಮುಂದುವರೆಯಲಿದೆ.