ಹುಕ್ಕೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಇಂದು ಹುಕ್ಕೇರಿ ನಗರದಲ್ಲಿ ವಿವಿಧ ಕಾರ್ಮಿಕ ಸಿ ಆಯ್ ಟಿ ಯು ಸಂಘಟನೆಗಳಿಂದ ಪ್ರತಿಭಟನೆ ಜರುಗಿತು.
ಹುಕ್ಕೇರಿ ಪಟ್ಟಣದ ಕೋರ್ಟ ಸರ್ಕಲ್ ಬಳಿ ತಾಲೂಕಿನ ವಿವಿಧ ಅಸಂಘಟಿತ ಸಾವಿರಾರು ಕಾರ್ಮಿಕರು ಪ್ರತಿಭಟನೆ ಜರುಗಿಸಿ ಸರ್ಕಾರಗಳ ವಿರುದ್ಧ ಘೋಷನೆ ಕೂಗಿ ಮಾನವ ಸರಪಳಿ ಜರುಗಿಸಿ ಕೇಲ ಕಾಲ ರಸ್ತೆ ತಡೆ ಮಾಡಿದರು. ಮಾದ್ಯಮಗಳೊಂದಿಗೆ ಮಾತನಾಡಿದ ತಾಲೂಕಾ ಸಿ ಆಯ್ ಟಿ ಯು ಸಂಚಾಲಕಿ ಶ್ರೀಮತಿ ಸಿ ಎಸ್ ಮಗದುಮ್ಮ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ತಿದ್ದು ಪಡಿ ಮಾಡುವ ಮೂಲಕ ದುಡಿಯುವ ಕೈಗಳಿಗೆ ಸಿಗುವ ಸೌಲಭ್ಯಗಳನ್ನು ಕಸ೮ದುಕೊಳ್ಳುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಕಾರಣ ರಾಜ್ಯ ಮತ್ತು ದೇಶದ ಅಸಂಘಟಿತ ಕಾಮಿಕರು ಇದನ್ನು ಖಂಡಿಸಿ ಬಂದ್ ಕರೆ ನಿಡಿದ್ದಾರೆ ಅದರಂತೆ ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿವಿಧ ಸಂಘಟನೆಗಳ ಕಾರ್ಮಿಕರು ಉಗ್ರವಾದ ಹೋರಾಟ ಮಾಡಿ ಪ್ರತಿಭಟನೆ ಕೈ ಗೊಂಡಿದ್ದೆವೆ , ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು
ಇನ್ನೋಬ್ಬ ಕಾರ್ಮಿಕ ಮುಖಂಡ ಮಾತನಾಡಿ ವಿವಿಧ ಸರಕಾರಿ ಯೋಜನೆಗಳ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಸಹ ಕೆಲಸದ ಸಮಯದ ಜೋತೆಗೆ ಇನ್ನೂಳಿದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಇಂದು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಇದೆ ರೀತಿ ಮುಂದುವರೆದರೆ ಉಗ್ರವಾದ ಹೋರಾಟಕ್ಕೆ ಅಣಿ ಯಾಗ ಬೇಕಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.