Vijaypura

ಕೃಷ್ಣಾ ಉಗಮಸ್ಥಾನದಲ್ಲಿ ಗಂಗಾ ಪೂಜೆ ಸಲ್ಲಿಸುವಂತೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆಗ್ರಹ

Share

ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ವಿರುದ್ಧ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿ ಉಗಮ ಸ್ಥಾನದಲ್ಲಿ ಗಂಗಾ ಪೂಜೆ ಸಲ್ಲಿಸುವಂತೆ ಆಗ್ರಹಿಸಿದರು. ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಮಹಾಬಲೇಶ್ವರ ಕೃಷ್ಣೆಯ ಉಗಮ ಸ್ಥಾನದಲ್ಲಿ ಗಂಗಾ ಪೂಜೆ ಸಲ್ಲಿಸುವಂತೆ ಜೂನ್ 27 ರಂದು ಪತ್ರ ಬರೆದಿದ್ದೇನೆ. ಇದುವರೆಗೂ ಪತ್ರಕ್ಕೆ ಉತ್ತರ ಬಂದಿಲ್ಲಾ, ಕಾವೇರಿ ನದಿಯಂತೆ ಕೃಷ್ಣೆಗೂ ಮಹತ್ವ ನೀಡುವಂತೆ ಆಗ್ರಹಿಸಿದರು.

ತಮ್ಮ ಪತ್ರದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯದ ನೀರಾವರಿ ಸಚಿವರು ಪೂಜೆ ಸಲ್ಲಿಸಲು ಆಗ್ರಹಿಸಿದ್ದೆ, ತಾವು ಸಚಿವರಿದ್ದಾಗ ಮಹಾಬಲೇಶ್ವರ ದಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯ ಪ್ರಾರಂಭಿಸಿದ್ದೆ, ಸರ್ಕಾರದಿಂದಲೇ ಪೂಜೆ ಸಲ್ಲಿಸುವಂತೆ ಮಾಡಿದ್ದೆ ಎಂದು ತಿಳಿಸಿದರು. ಕಳೆದ 18 ವರ್ಷಗಳಿಂದ ವಿಜಯಪುರ ಹಾಗೂ ಬಾಗಲಕೋಟ ರೈತರು ಪೂಜೆ ಸಲ್ಲಿಸುತ್ತಾ ಬಂದಿದ್ದಿವಿ, ಈ ಹಿಂದೆ ಸಚಿವ ಎಂ.ಬಿ.ಪಾಟೀಲ ನೀರಾವರಿ ಸಚಿವರಿದ್ದಾಗ ಕಡ್ಲಿಗರ ಹುಣ್ಣುಮೆ ಬಳಿಕ ಪೂಜೆ ಸಲ್ಲಿಸಿದ್ದರು.ಇನ್ನು ಮುಂದೆ ಸರ್ಕಾರ ಗಂಗಾ ಪೂಜೆ ಸಲ್ಲಿಸುವ ಸಂಪ್ರದಾಯ ಮುಂದುವರೆಸಲಿ ಎಂದು ಆಗ್ರಹಿಸಿದರು.

Tags:

error: Content is protected !!