Belagavi

ಶಿಕ್ಷಣ ಮತ್ತು ಸಮಯದ ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ; ಡಾ. ಅನುಪಮಾ

Share

ನಾವು ಸರಿಯಾದ ಸಮಯದಲ್ಲಿ ನಮ್ಮ ಭವಿಷ್ಯದ ನಿರ್ಣಯ ಸ್ವತಃ ತೆಗೆದುಕೊಳ್ಳದಿದ್ದರೇ, ಬೇರೆಯವರು ನಮ್ಮ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ. ಒಂದು ವಿಷಯದ ಕೊನೆ ಹೊಸ ಅಧ್ಯಾಯದ ಆರಂಭವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸಮಯದ ಯೋಜನಾಬದ್ಧ ನಿರ್ಣಯವನ್ನು ಕೈಗೊಂಡು ಸಾರ್ಥಕ ಜೀವನವನ್ನು ನಡೆಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಸಾಹಿತಿ ಡಾ. ಎಚ್.ಎಸ್. ಅನುಪಮಾ ಅವರು ಕರೆ ನೀಡಿದರು.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ, 2024-25ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕುಲಪತಿಗಳಾದ ಸಿ.ಎಂ. ತ್ಯಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಉಪಸ್ಥಿತರಿದ್ಧರು. ಅತಿಥಿಗಳಾಗಿ ಕುಲಸಚಿವರಾದ ಸಂತೋಷ್ ಕಾಮಗೌಡ, ಡಿ.ಎನ್. ಪಾಟೀಲ್, ಎಂ.ಎ. ಸಪ್ನಾ, ವಾಯ್.ಎಸ್. ಬಲವಂತಗೋಳ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.

ಈ ವೇಳೆ ಮಾರ್ಗದರ್ಶನ ನೀಡಿದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಸಾಹಿತಿ ಡಾ. ಎಚ್.ಎಸ್. ಅನುಪಮಾ ಅವರು, ಒಂದು ಕೊನೆ ಹೊಸ ವಿಷಯದ ಆರಂಭವಾಗಿರುತ್ತದೆ. ವಿಶ್ವವಿದ್ಯಾಲಯದೊಂದಿಗೆ ಬಾಂದವ್ಯಕ್ಕೆ ಎಂದಿಗೂ ಕೊನೆ ಇರುವುದಿಲ್ಲ. ಈಗ ಮಾಡಿರುವ ಮಾರ್ಗದರ್ಶನಗಳು ನಂತರ ನೆನಪಾಗುತ್ತವೆ. ಸಮಯ ಮತ್ತು ಶಿಕ್ಷಣ, ಭವಿಷ್ಯದ ನೋಟವನ್ನು ಸೃಷ್ಠಿಸಲು ಸಹಕಾರಿಯಾಗಿವೆ. ಮಹತ್ವದ ಸಮಯವನ್ನು ವ್ಯರ್ಥವಾಗಲು ಬಿಡಬಾರದು. ಬಂದ ಘಳಿಗೆಯ ಬಂದ ಕ್ಷಣದ ಯೋಜನಾ ಬದ್ಧವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಆತ್ಮಾವಲೋಕವನ್ನು ಮಾಡಿ ಭವಿಷ್ಯದ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಸ್ವತಃ ನಿರ್ಣಯ ಕೈಗೊಳ್ಳದಿದ್ದರೇ, ಬೇರೆಯವರು ತಮ್ಮ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಅದು ಆವಾಗ ಸ್ವಇಚ್ಛೆಯಾಗಿರದೇ, ಹೇರಿಕೆಯಾಗಿರುತ್ತದೆ ಎಂದರು.

ಇದೇ ವೇಳೆ ಅವರು ತಮ್ಮ ಕವನ ಸಾಹಿತ್ಯದ ಮೂಲಕ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಆರ್.ಸಿ.ಯು ಸಿಬ್ಬಂದಿಗಳು ಭಾಗಿಯಾಗಿದ್ಧರು.

Tags:

error: Content is protected !!