ಖಾನಾಪೂರ ತಾಲೂಕಿನ ನಂದಗಡ ರಸ್ತೆಯ ಮೇಲೆ ಆಗಿರುವ ತೆಗ್ಗುಗಳ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದೆ. ವರ್ಷಗಳ ಹಿಂದಿನಿಂದ ಬೃಹತ್ ತೆಗ್ಗು ಗುಂಡಿಗಳ ಬಗ್ಗೆ ತೊಂದರೆ ಅನುಭವಿಸುತ್ತಿದ್ದ ಬಗ್ಗೆ ಇನ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಈಗ ಇನ್ ನ್ಯೂಸ್ ಇಂಪ್ಯಾಕ್ಟ್ ಆಗಿದ್ದು, ತಾತ್ಕಾಲಿಕ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ.
“ನಾವು ಹಾಕಿದ ಓಟಿನ ಬೆಲೆ ಈಗ ಗೊತ್ತಾಗಿದೆ” ಎಂಬ ಜನಮನದ ಮಾತನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡ್ಹೀಯೋ ಶಾಸಕರಿಗೂ, ಅಧಿಕಾರಿಗಳಿಗೂ ಎಚ್ಚರ ನೀಡಿದಂತಾಗಿದೆ. ಇತ್ತೀಚೆಗೆ ಒಂದು ಕಾರು ತೆಗ್ಗಿನಲ್ಲಿ ಸಿಲುಕಿದ ಘಟನೆಯೂ ಕೂಡ ನಡೆದಿದೆ., ಪ್ರವಾಸಿಗರು ಬಸ್ ಟ್ರಾಫಿಕ್ ಜಾಮ್’ನಲ್ಲಿ ನಡೆದಸಿ ‘ಸರ್ಕಸ್’ನ ದೃಶ್ಯಗಳು ಸಮಸ್ಯೆಯ ಗಂಭೀರತೆಯನ್ನು ಬಿಂಬಿಸಿದ್ದವರು. ಇದೀಗ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ನೀಡಲಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಮ್ಮ ‘ಇನ್ ನ್ಯೂಸ್’ ಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.