Vijaypura

ಸ್ವಪಕ್ಷದ ಅಧ್ಯಕ್ಷರ ವಿರುದ್ಧವೇ ಸದಸ್ಯರ ಅಸಮಾಧಾನ; ಧರಣಿ ಮಾಡುವ ಎಚ್ಚರಿಕೆ

Share

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪುರಸಭೆ ಅಧ್ಯಕ್ಷರ ವಿರುದ್ಧ ಸ್ವಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸವನ ಬಾಗೇವಾಡಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ವಿರುದ್ಧ ಸ್ವ ಪಕ್ಷದ ಉಪಾಧ್ಯಕ್ಷ ಸೇರಿ 11 ಜನ ಸದಸ್ಯರಿಂದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಸವನ ಬಾಗೇವಾಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸದಸ್ಯರು ಅಧ್ಯಕ್ಷರು ನಮ್ಮನ್ನು ವಿಸ್ವಾಸಕ್ಕೆ ತೆಗೆದು ಕೊಳ್ಳುತ್ತಿಲ್ಲಾ.

ನಮ್ಮನ್ನು ಕಡೆಗಣಿಸುತ್ತಿದ್ದಾರೆ, ನಮ್ಮ ವಾರ್ಡಗಳ ಸಮಸ್ಯೆ ಗಳನ್ನು. ಕೆಲಸಗಳಿಗೆ ಸ್ಪಂದನೆ ಮಾಡಿತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಪುರಸಭೆಯಲ್ಲಿ ಅಧ್ಯಕ್ಷರ ಪತಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ವಾರ್ಡಗಳ ಅಭಿವೃದ್ಧಿ ಆಗುತ್ತಿಲ್ಲ ಇದೇ ರೀತಿ ಮುಂದುವರದರೆ ನಾವು ಎಲ್ಲರೂ ಜಿಲ್ಲಾಧಿಕಾರಿ ಕಾರ್ಯಾಲಯ ಮುಂದೆ ಧರಣಿ ಮಾಡುತ್ತೇವೆ ಅಂತ ಉಪಾಧ್ಯಕ್ಷ ರಾದ ಅಶೋಕ್ ಹಾರಿವಾಳ ಅವರು ಹೇಳಿದರು. ಇದೇ ಸಮಯದಲ್ಲಿ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!