ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೂದಗಂಗಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಹೆಚ್ಚಳವಾಗಿದ್ದು ಎರಡನೇ ಬಾರಿಗೆ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತವಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ದೂದಗಂಗಾ ನದಿ ದಡದಲ್ಲಿರುವ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತವಾಗಿದೆ. 15 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತವಾಗಿದೆ. ಜಲಾವೃತವಾದ ದೇವಸ್ಥಾನಕ್ಕೆ ಮೊಣಕಾಲುವರೆಗೆ ಬಂದಿರುವ ನೀರಿನಲ್ಲೆ ತೆರಳಿ ಬಂಗಾಲಿ ಬಾಬಾ ದರ್ಶನವನ್ನ ಭಕ್ತರು ಪಡೆಯುತ್ತಿದ್ದಾರೆ.