Chikkodi

ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣು

Share

15 ವರ್ಷದ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

ಗೋವಿಂದ ಸಚಿನ ಕಾಂಬಳೆ (15) ಆತ್ಮಹತ್ಯೆಗೆ ಶರಣಾಗಿರುವ ಬಾಲಕ.ಮೃತ ಬಾಲಕ ಮಹಾರಾಷ್ಟ್ರದ ರಾಜ್ಯದ ಅಲಾಸ ಗ್ರಾಮದವರು ಎಂದು ತಿಳಿದು ಬಂದಿದೆ.ಕಳೆದ 1 ವರ್ಷದಿಂದ ಅಂಕಲಿ ಗ್ರಾಮದಲ್ಲಿ ಬಾಲಕ ವಾಸವಾಗಿದ್ದನು.ಇವತ್ತು ಬೆಳಗಿನ ಜಾವ ದನದ ಕೊಟ್ಟಿಗೆಯಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಮೃತ ಬಾಲಕ ಮಾನಸಿಕ ಅಸ್ವಸ್ಥತೆವಾಗಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!