hubbali

ಪೊಲೀಸ್ ಸಿಬ್ಬಂದಿಗಳ ತೂಕ ಇಳಿಸಿಕೊಳ್ಳಲು ಪೊಲೀಸ ಕಮಿಷನರ್ ನ್ಯೂ ಪ್ಲಾನ್:ಒಂದೇ ತಿಂಗಳಲ್ಲಿ 10 ಕೆಜಿ ಇಳಿಸಿದ ಸಿಬ್ಬಂದಿಗಳು

Share

ಪೊಲೀಸ್ ಇಲಾಖೆ ಅಂದ್ರೆ ಅದು ಶಿಸ್ತಿನ ಇಲಾಖೆ ಹೀಗಾಗಿ ಪೊಲೀಸರಿಗೆ ಶಿಸ್ತು ಮುಖ್ಯ ಅದರಲ್ಲೂ ಮುಖ್ಯವಾಗಿ ಪೊಲೀಸರಿಗೆ ದೈಹಿಕ ಸಾಮರ್ಥ್ಯ ಮುಖ್ಯ ಹೀಗಾಗಿ ಪೊಲೀಸ್ ಸೆಲೆಕ್ಷನ್ ವೇಳೆಯಲ್ಲಿ ಸಾಕಷ್ಟು ದೈಹಿಕ ಪರೀಕ್ಷೆ ನಡೆಸಿದ ಬಳಿಕ ಇಲಾಖೆಯಲ್ಲಿ ಸೆಲೆಕ್ಟ್ ಆಗ್ತಾರೇ.ಆದ್ರೆ ಇಲಾಖೆಗೆ ಸೇರಿದ ನಂತರ ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ದೈಹಿಕ ಸಾಮರ್ಥ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಹಿನ್ನೆಲೆ ದಪ್ಪಗಾಗಿ.ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಆಗೋದನ್ನಾ ಕೂಡ ನಾವು ನೋಡಿದ್ದೇವೆ ಹೀಗಾಗಿ ಹು-ಧಾ ಪೊಲೀಸ್ ಕಮಿಷನರ ಶಶಿಕುಮಾರ್ ದಪ್ಪಗಾದ ಸಿಬ್ಬಂದಿಗಳಿಗೆ ತೂಕ ಕಡಿಮೆ ಮಾಡುವ ಸಲುವಾಗಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದರೆ.

ಹೀಗೆ ಗ್ರೌಂಡ್ ನಲ್ಲಿ ನಿಂತು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ವರ್ಕೌಟ್ ಮಾಡುತ್ತಿರೋ ಇವರೆಲ್ಲ ಹು-ಧಾ ಪೊಲೀಸ್ ಕಮಿಷನರೇಟ್’ನಲ್ಲಿ ಕೆಲ್ಸ ಮಾಡುತ್ತಿರೋ ಪೊಲೀಸ್ ಸಿಬ್ಬಂದಿ. ಕೆಲಸದ ಒತ್ತಡದ ನಡುವೆ ಗಮನ ಹರಿಸದ ಕಾರಣ ವಿಪರೀತ ದೇಹ ತೂಕವನ್ನು ಹೊಂದಿದ್ದರು,ಹೀಗಾಗಿ ಇವರ ತೂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಮಿಷನರ್ ಶಶಿಕುಮಾರ್ ಅವರು ಒಂದು ತಿಂಗಳ ಕಾಲ ಅಧಿಕ ತೂಕ ಹೊಂದಿದ ಸಿಬ್ಬಂದಿಗೆ ತೂಕ ಕಡಿಮೆ ಮಾಡಿಕೊಳ್ಳುವ ಜೊತೆಗೆ ದೈಹಿಕ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಗೋಕುಲ್ ರಸ್ತೆಯಲ್ಲಿನ ಹೊಸ ಸಿ ಆರ್ ದಲ್ಲಿ ಶಿಬಿರ ಏರ್ಪಡಿಸಿದ್ದರು. ಈ ಶಿಬಿರದಲ್ಲಿ ಭಾಗಿಯಾದ ಸಿಬ್ಬಂದಿ ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ ಅಂತಾ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಸದ್ಯ ಅವಳಿ ನಗರದಲ್ಲಿನ ಪೊಲೀಸರ ಆರೋಗ್ಯದ ಹಿತದ್ರಷ್ಟಿ ಹಾಗೂ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯ ಶಿಸ್ತಿನ ವಿಚಾರಕ್ಕೇ ಸಂಬಂಧಿಸಿದಂತೆ ಇಂತಹ ಶಿಬಿರವನ್ನು ಆಯೋಜನೆ ಮಾಡಿರುವ ಕಮಿಷನರ್ ಶಶಿಕುಮಾರ್ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಡಿಸಿದ್ದು. ಈ ರೀತಿಯ ಶಿಬಿರಗಳು ನಿರಂತರವಾಗಿ ನಡೆಯಲಿ ಎಂದು ಆಶಯ ವ್ಯಕ್ತಡಿಸಿದ್ದಾರೆ.

Tags:

error: Content is protected !!