Banglore

ಖರ್ಗೆ ಸಂದೇಶ ನೀಡಿದ್ದಾರೆ ಒಟ್ಟಿಗೆ ಕೆಲಸ: ಡಿಸಿಎಂ ಡಿಕೆಶಿ

Share

ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಧ್ಯಕ್ಷರು ನಮ್ಮಗೆಲ್ಲರಿಗೆ ಬುದ್ಧಿವಾದ ಹೇಳಿದ್ದಾರೆ ಒಂದು ಸಂದೇಶ ನೀಡಿದ್ದಾರೆ ಅವರ ಮಾತಲ್ಲಿ ನಡೆದುಕೊಂಡು ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಷಾಢಮಾಸದ ಎರಡನೇ ಶುಕ್ರವಾರ ತಮ್ಮ ಕುಟುಂಬದೊಂದಿಗೆ ಚಾಮುಂಡೇಶ್ವರಿ ದೇವತೆಯ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ, ನನಗೇನು ಬೇಕೋ ಅದನ್ನು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ, ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಮಾತಾಡಲಾರೆ ಎಂದರು.

ಯಾವುದೇ ಕೆಲಸ ಆರಂಭಿಸುವ ಮೊದಲು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವುದು ನಮ್ಮಲ್ಲಿರುವ ಪದ್ಧತಿ, ತಾಯಿ ಚಾಮುಂಡಿ ಎಲ್ಲರ ದುಃಖವನ್ನು ದೂರ ಮಾಡುವ ದೇವತೆಯಾಗಿದ್ದಾಳೆ, ಈ ಸಲ ಇಡೀ ರಾಜ್ಯಕ್ಕೆ ಒಳ್ಳೆಯ ಮಳೆ ನೀಡಿ ಜನರಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುವಂತೆ ಮಾಡಿದ್ದಾಳೆ ಎಂದು ಶಿವಕುಮಾರ್ ಹೇಳಿದರು.

Tags:

error: Content is protected !!