Banglore

ಸ್ವಯಂ ನಿವೃತ್ತಿಗೆ ಮುಂದಾದ ಬರಮನಿ

Share

ಖಡಕ ಅಧಿಕಾರಿಯಾಗಿ ಬೆಳಗಾವಿ ಸೇರಿದಂತೆ ವಿವಿಧಡೆ ಹೆಸರು ತನ್ನದೆ ಛಾಪು ಮೂಡಿಸಿ ಸಧ್ಯ ಧಾರವಾಡ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಎನ್.ವಿ. ಬರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಕೆಲ ತಿಂಗಳಗಳಿಂದೆ ನಡೆದ ಕಾಂಗ್ರೆಸ ಕಾರ್ಯಕ್ರಮದ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಅವರಿಂದ ನಾರಾಯಣ ಬರಮನಿಯವರು ಅಪಮಾನಕ್ಕೆ ಒಳಗಾಗಿದ್ದರು. ಸ್ವಯಂ ನಿವೃತ್ತಿಗೆ ಮುಂದಾಗಿದರುವುದಕ್ಕೆ ಕಾರಣ ಎನ್ನಲಾಗಿದೆ, ಈ ಸಂಬಂಧ ಈಗಾಗಲೇ ರಾಜೀನಾಮೆ ಪತ್ರ ಸಹ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ನಾರಾಯಣ ಭರಮನಿ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಹಿನ್ನೆಲೆ ಯಲ್ಲಿ ಮನವೊಲಿಕೆ ಯತ್ನ ನಡೆದಿದೆ ಎನ್ನಲಾಗಿದೆ. ಸ್ವಯಂ ಪ್ರೇರಿತ ನಿವೃತ್ತಿಗೆ ಬರಮನಿ ಅವರು ಅರ್ಜಿ ಸಲ್ಲಿಸಿದ್ದಾರೆ. ತಮಗಾದ ಅವಮಾನಕ್ಕೆ ನೊಂದುಕೊಂಡಿದ್ದರು. ಹೀಗಾಗಿ, ಕೆಲಸದಿಂದಲೇ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು. ಹಿರಿಯ ಅಧಿಕಾರಿಗಳು ಸಿಎಂ ಸಮ್ಮುಖದಲ್ಲಿ ಅಧಿಕಾರಿಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮನವೊಲಿಕೆಯಿಂದ ಅಧಿಕಾರಿ ಬರಮನಿ ಅವರು ಸ್ವಲ್ಪಮಟ್ಟಿಗೆ ಶಾಂತವಾಗಿದ್ದಾರೆ. ಎಂಬ ಮಾಹಿತಿ ದೊರೆತಿದೆ.

Tags:

error: Content is protected !!