ನಿನ್ನೆಯಷ್ಟೇ ಸಿದ್ಧರಾಮಯ್ಯ ಲಕ್ಕಿ ಲಾಟರಿಯಿಂದ ಸಿಎಂ ಆಗಿದ್ದಾರೆಂದು ಹೇಳಿಕೆ ನೀಡಿದ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಇಂದು ತಮ್ಮ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದು, ಸಿದ್ಧರಾಮಯ್ಯ ಮಾಸ್ ಲೀಡರ್ ಅವರನ್ನು ಸಿಎಂ ಮಾಡುವ ಶಕ್ತಿ ನನ್ನಲ್ಲಿಲ್ಲ ಎಂದಿದ್ದಾರೆ.
ಕೆಲ ಮಾಧ್ಯಮಗಳನ್ನು ತಾವು ನೀಡಿರುವ ಹೇಳಿಕೆಯನ್ನು ತಿರುಚಿ ತೆಜೋವಧೆ ಮಾಡುವ ಪ್ರಯತ್ನವನ್ನು ಮಾಡುತ್ತಿರುವುದು ಸರಿಯಲ್ಲ. ಕೆ.ಆರ್. ಪೇಠೆಯಲ್ಲಿ ಆತ್ಮೀಯ ಸ್ನೇಹಿತರೊಬ್ಬರ ಜೊತೆಗೆ ಮಾತನಾಡುವಾಗ ಸಿಎಂ ಸಿದ್ಧರಾಮಯ್ಯನವರ ವಿಷಯ ಪ್ರಸ್ತಾಪವಾಗಿದೆ. ಸಿದ್ಧರಾಮಯ್ಯ ಅವರಿಗೆ ಲಕ್ಕಿ ಲಾಟರಿ ಇತ್ತು. ಅದಕ್ಕೆ ಅವರು ಸಿಎಂ ಆದ್ರು ಎಂದಿದ್ದೇನೆ. ಕಾಂಗ್ರೆಸ್ ಪ್ರಮುಖರಾದ ಸೋನಿಯಾ ಗಾಂಧಿ ಅವರನ್ನು ನಾನೇ ಭೇಟಿ ಮಾಡಿಸಿದ್ಧೇನೆ
ಎಂದು ಹೇಳುತ್ತಿರುವುದು ತಪ್ಪು. ಸೋನಿಯಾ ಗಾಂಧಿ ಅವರನ್ನು ಸಿದ್ಧರಾಮಯ್ಯನವರು ಭೇಟಿಯಾಗುವ ವೇಳೆ ನಾನು ಜೊತೆಗೆ ಹೋಗಿದ್ದೆ. ಸಿದ್ಧರಾಮಯ್ಯ ಒಬ್ಬ ಮಾಸ್ ಲೀಡರ್ ಅವರನ್ನು ಸಿಎಂ ಮಾಡುವ ಶಕ್ತಿ ನನ್ನಲ್ಲಿಲ್ಲ. ಸಿಎಂ ಸಿದ್ಧರಾಮಯ್ಯ ಮತ್ತು ನನ್ನ ನಡುವಿನ ಸಂಬಂಧವನ್ನು ಕೆಲವರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು 9 ಜನ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ಧೇವೆ. ಕಾಂಗ್ರೆಸ್ ಕೂಡ ಅವರ ಬೆಂಬಲವನ್ನು ನೋಡಿ ಮುಖ್ಯಮಂತ್ರಿ ಮಾಡಿತೆ ಹೊರತು ನಾವು ಹೇಳಿದ್ದಕ್ಕಲ್ಲ ಎಂದು ಸ್ಪಷ್ಟಪಡಿಸಿದರು.