Bailahongala

ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Share

ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿನ ಇತಿಹಾಸದ ಪುಟದಲ್ಲಿ ಅಚ್ಚಳಿಯಾಗಿ ಉಳಿದಿದೆ. ಈ ಕ್ರಾಂತಿಗೆ ಶರಣೆ ಕಲ್ಯಾಣಮ್ಮ ಕೂಡ ಕಾರಣೀಕರ್ತರಾಗಿದ್ದರು ವಚನ ಸಾಹಿತ್ಯದ ಉಳಿವಿಗಾಗಿ ತನ್ನ ಜೀವವನ್ನೇ ಬಲಿದಾನಗೈದ ಈ ಮಹಾತಾಯಿಯ ಐಕ್ಯಸ್ಥಳ ಕಣ್ಮರೆ ಆಗುವ ಅಂಚಿಗೆ ತಲುಪಿದೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಇರುವಂತ ಶರಣೆ ಕಲ್ಯಾಣಮ್ಮನ ಐಕ್ಯಸ್ಥಳ ಸಾಕಷ್ಟು ಹಾಳಾಗಿದ್ದು ಪ್ರತಿ ಬಾರಿ ಮಳೆಗಾಲ ಪ್ರಾರಂಭವಾದಾಗ ಮಳೆಯಿಂದಾಗಿ ಸಾಕಷ್ಟು ಹಾನಿಗಳಾಗುತ್ತದೆ ಕೆಲವೊಂದು ಬಾರಿ ಕಲ್ಯಾಣಮ್ಮನ ಐಕ್ಯ ಸ್ಥಳದ ಮೇಲ್ಚಾವಣಿ ಮುರಿದು ಬಿದ್ದಿದ್ದು ಉದಾಹರಣೆಗಳು ಇವೆ

ಕೆಲ ಸ್ಥಳೀಯರು ಕಲ್ಯಾಣಮ್ಮನ ಐಕ್ಯಸ್ಥಳವನ್ನು ಈ ಪರಿಸ್ಥಿತಿಯಲ್ಲಿ ನೋಡಲಾಗದೆ ನಮ್ಮದೇ ಖರ್ಚಿನಲ್ಲಿ ಸಾಕಷ್ಟು ಬಾರಿ ರಿಪೇರಿ ಮಾಡುತ್ತಾ ಬಂದಿರುತ್ತಾರೆ ಆದರೆ ಈ ಬಾರಿ ಸಾಕಷ್ಟು ಮಳೆ ಆಗಿದ್ದರಿಂದ ಕಲ್ಯಾಣಮ್ಮನ ಐಕ್ಯಸ್ಥಳ ಸಂಪೂರ್ಣವಾಗಿ ಹಾಳಾಗಿದ್ದು ಗೋಡೆಗಳು ಯಾವ ಕ್ಷಣದಲ್ಲಿ ಆದರೂ ಬೀಳುವ ಹಂತದಲ್ಲಿ ತಲುಪಿವೆ ಇಷ್ಟೆಲ್ಲ ಘಟನೆಗಳು ನಡೆದರು ಸಂಬಂಧಪಟ್ಟ ಮತ್ತು ಸ್ಥಳೀಯ ಯಾವುದೇ ಅಧಿಕಾರಿಗಳು ಕೂಡ ಇದುವರೆಗೂ ಸ್ಥಳಕ್ಕೆ ಭೇಟಿ ನೀಡದೆ ಇರುವುದರಿಂದ ಸ್ಥಳೀಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ಕಲ್ಯಾಣಮ್ಮನ ಐಕ್ಯಸ್ಥಳದ ಮೇಲ್ಚಾವಣಿ ಸಂಪೂರ್ಣವಾಗಿ ಹಾಳಾಗಿದ್ದು ಯಾವ ಕ್ಷಣದಲ್ಲಿ ಆದರೂ ಗೋಡೆಗಳು ಹಾಗೂ ಮೇಲ್ಚಾವಣಿ ನೆಲ ಕಚ್ಚಬಹುದು ಎಂದು ಸ್ಥಳೀಯ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಹಾಗಿದ್ದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾದ ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ್ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು

ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ? ಕಾದು ನೋಡೋಣ

ವರದಿಗಾರರು
ಶಾನೂಲ ಮತ್ತೆಖಾನ
ಬೈಲಹೊಂಗಲ

Tags:

error: Content is protected !!