ಬೆಳಗಾವಿ: ಅತ್ಯುತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ಕಲ್ಪಿಸಲು ಸದಾ ಕಟಿಬದ್ದವಾಗಿರುವ ಬೆಳಗಾವಿಯ ಅರಿಹಂತ ಆಸ್ಪತ್ರೆಯು ಈ ಭಾಗದ ರೋಗಿಗಳಿಗೆ ವರದಾನವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ರೋಗಿಗಳಿಗೆ ಆಶಾಕಿರಣವಾಗಿದೆ. ಆಸ್ಪತ್ರೆಯು ಕೇವಲ ಚಿಕಿತ್ಸೆ ನೀಡುವದಲ್ಲದೇ ಮಾನವೀಯ ನೆಲೆಯಲ್ಲಿ ಸಹಾನುಭೂತಿ, ಶ್ರೇಷ್ಠತೆಯ ಸಮುದಾಯದ ಆರೈಕೆಗಾಗಿ ಹಾಗೂ ಈ ಭಾಗದಲ್ಲಿ ಹೆಚ್ಚುತ್ತಿರುವ ವೈದ್ಯಕೀಯ ಸೇವೆಗಳ ಅಗತ್ತ್ಯತೆಯನ್ನು ಪೂರೈಸಲು ಪ್ರಾಮಾಣಿಕವಾಗಿ ಸ್ಪಂಧಿಸಲಾಗುತ್ತಿದೆ. ಅದರಂತೆ ಈ ಬಾಗದ ಜನರಿಗೆ ಭರವಸೆಯ ಬೆಳಕಾಗಿ ಪರಿಣಮಿಸಿದೆ.
ಅಂಬೆಗಾಲಿಡುತ್ತಿರುವ ಕೇವಲ ಎರಡು ವರ್ಷದ ಅರಿಹಂತ್ ಆಸ್ಪತ್ರೆಯು ಈ ಭಾಗದ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ರೋಗಿಗಳ ಆರೈಕೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿದೆ. ಆರೋಗ್ಯ ಸಮಸ್ಯೆ ಎಂದು ಬಂದಾಗ ಮೊದಲು ಸ್ಮೃತಿಪಟಲದಲ್ಲಿ ಹೊಳೆಯುವದೆ ಅರಿಹಂತ ಆಸ್ಪತ್ರೆಯ ಹೆಸರು.
ದೀಕ್ಷಿತ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಅಂಗ ಸಂಸ್ಥೆಯಾಗಿರುವ ಅರಿಹಂತ್ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿದೆ. ಶಸ್ತ್ರಚಿಕಿತ್ಸಾ ಕೊಠಡಿಗಳು, ಕ್ಯಾಥ ಲ್ಯಾಬ್, ಈವ್ರನಿಗಾ ಘಟಕಗಳು, ಮತ್ತು ವಿಶ್ವದರ್ಜೆಯ ವಾರ್ಡಗಳನ್ನು ಹೊಂದಿದೆ. ನೂರು ಹಾಸಿಗೆಗಳ ಮೂಲಕ ರೋಗಿಗಳ ಸೇವೆಯಲ್ಲಿ ತೊಡಗಿರುವ ಆಸ್ಪತ್ರೆಗೆ ಎನ್‌ಎಬಿಹೆಚ್ ಮಾನ್ಯತೆ ಲಭಿಸಿದೆ. ಬಹುವಿಧ ವೈದ್ಯಕೀಯ ಸೇವೆ ನೀಡುತ್ತಿರುವ ಆಸ್ಪತ್ರೆಯು ರೋಗಿಗಳ ವಿಶ್ವಾಸ ಗಳಿಸುತ್ತ ಮುನ್ನಡೆಯುತ್ತಿದೆ.
ಹೃದಯ ಆರೈಕೆ ಮತ್ತು ಡಾ. ದೀಕ್ಷಿತ್
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಾಹಕರಾದ ಡಾ. ಎಂ ಡಿ ದಿಕ್ಷಿತ ಅವರ ಮುಂದಾಳತ್ವದಲ್ಲಿ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗವು ಸಂಪೂರ್ಣವಾಗಿ ರೋಗಿಗಳ ಸೇವೆಗೆ ಸದಾ ತೆರೆದಿದೆ. ಡಾ. ದಿಕ್ಷಿತ ಅವರು ಇಲ್ಲಿಯವರೆಗೆ ಸುಮಾರು 35 ಸಾವಿರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದಾರೆ.
ಆರ್ಟರಿಯಲ್ ಸ್ವಿಚ್ ಶಸ್ತ್ರಚಿಕಿತ್ಸೆ, ಫಾಂಟನ್, ಸೆನ್ನಿಂಗ್ಸ್ ಮತ್ತು ಚಿಕ್ಕ ರಂದ್ರದ ಮೂಲಕ ಶಸ್ತ್ರಚಿಕಿತ್ಸೆಗಳಂತಹ ಸಂಕೀರ್ಣ ಕಾರ್ಯವಿಧಾನಗಳ ಮೂಲಕ, ಡಾ. ದೀಕ್ಷಿತ್ ಅವರು ಸಾವಿರಾರು ರೋಗಿಗಳ ಜೀವ ಉಳಿಸಿದ್ದು, ಕೇವಲ 900 ಗ್ರಾಮದ ತೂಕವಿರುವ ನವಜಾತ ಶಿಶುವಿಗೆ ಹೃದಯ ಶಶ್ತ್ರಚಿಕಿತ್ಸೆ ಹಾಗೂ 7 ತಿಂಗಳ ಗರ್ಭಿಣಿ ಮಹಿಳೆಗೆ ಬೈಪಾಸ್ ಶಸ್ತ್ರಚಿಕಿತ್ಸೆ ನೆರವೇರಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅಮೆರಿಕದ ಮಕ್ಕಳ ಶಸ್ತ್ರಚಿಕಿತ್ಸಕರ ಸಂಘ ಮತ್ತು ಯುರೋಪಿಯನ್ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕರ ಸಂಘದ ಜೀವಮಾನದ ಸದಸ್ಯರಾಗಿದ್ದಾರೆ. ಅರಿಯಂತ ಆಸ್ಪತ್ರೆಯು ಅವರ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಭವಿಷ್ಯದಲ್ಲಿ ರೋಗಿಗಳ ಆರೈಕೆಕೇಂದ್ರಿತ ಅತ್ಯಾಧುನಿಕ ಸೇವೆಗಳನ್ನು ಹಾಗೂ ವಿವಿಧ ವಿಭಾಗಗಳನ್ನು ಜನಸೇವೆಗೆ ನೀಡಲಿದೆ.
ಯುವನಾಯಕ: ಡಾ. ದಿಕ್ಷಿತ ಅವರ ದೂರದೃಷ್ಠಿಗೆ ಸಹಕಾರ ನೀಡಿದ ಸಹಕಾರ ರತ್ನ ರಾವಸಾಹೇಬ ಪಾಟೀಲ (ದಾದ) ಅವರು ಅರಿಹಂತ ಆಸ್ಪತ್ರೆಯನ್ನು ಸ್ಥಾಪಿಸಿ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರು. ಇಂದು ಅವರ ಪರಂಪರೆಯನ್ನು ಅವರ ಸುಪುತ್ರರು ಹಾಗೂ ಯುವ ಉದ್ಯಮಿ ಅಭಿನಂಧನ ಮತ್ತು ಯುವನಾಯಕ ಉತ್ತಮ ಪಾಟೀಲ ಅವರು ಜನರಿಗೆ ಸೇವೆ ನೀಡುತ್ತಿದ್ದಾರೆ. ಇವರಿಬ್ಬರೂ ಸಹಕಾರ, ಶಿಕ್ಷಣ, ಕೃಷಿ, ಜವಳಿ ಮತ್ತು ಸಕ್ಕರೆ ಉದ್ಯಮದಲ್ಲಿ ಸಕ್ರಿಯರಾಗಿದ್ದು, ರೈತರ ಏಳ್ಗೆಯೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಶಿಕ್ಷಣ ಲಭಿಸುವಂತೆ ಸ್ರಮವಹಿಸುತ್ತಿದ್ದಾರೆ. ಅದರಂತೆ ಸಮುದಾಯದ ಆರೋಗ್ಯವನ್ನು ಸುಧಾರಿಸುತ್ತ ಕಾಪಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳು:
ಎನ್‌ಎಬಿಹೆಚ್ ಮಾನ್ಯತೆ ಪಡೆದಿರುವ ಅರಿಹಂತ್ ಆಸ್ಪತ್ರೆಯು ಅಂಗಾಂಗ ಕಸಿ ನೆರವೇರಸಲು ಸಿದ್ದವಾಗಿ ನಿಂತಿದೆ. ಈಗಾಗಲೇ ಕಿಡ್ನಿ ಕಸಿ ನೇರವೇರಿಸುತ್ತಿದೆ. ಅತ್ಯಾಧುನಿಕ ರಕ್ತ ಸಂಗ್ರಹ ಕೇಂದ್ರ, ಅಂಬುಲನ್ಸ, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು, ಕ್ಯಾಥಲ್ಯಾಬ ಸೇರಿದಂತೆ ಗೆ ಅನುಮೋದನೆ ಪಡೆದಿದೆ. ಅಲ್ಲದೇ ಸಮಶೋಧನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುವ ಆಸ್ಪತ್ರೆಯು ತರಬೇತಿ ನೀಡುವಲ್ಲಿಯೂ ಒಂದು ಹೆಜ್ಜೆ ಮುಂದಿದೆ.
ಹೃದಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಒಂದೇ ಸೂರಿನಡಿ ನೆರವೇರಿಸಲಾಗುತ್ತಿದೆ. ಮುಖ್ಯವಾಗಿ ತೆರೆದ (ಬೈಪಾಸ್) ಶಸ್ತ್ರಚಿಕಿತ್ಸೆಗಳು, ಹೃದಯ ಕವಾಟ ಬದಲಾವಣೆ ಹಾಗೂ ರಿಪೇರ, ಹೃದಯದ ಚಿಕಿತ್ಸಾ ಪ್ರಕ್ರಿಯೆಗಳು, ರೊಬೊಟಿಕ್ ಮೂಲಕ ಮೊಣಕಾಲು ಶಸ್ತ್ರಚಿಕಿತ್ಸೆ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗುತ್ತಿದೆ. ಅಲ್ಲದೇ ಹೃದ್ರೋಗಶಾಸ್ತ್ರ, ಎಂಡೋಸ್ಕೋಪಿ, ಇಆರಸಿಪಿ, ಸಿಟಿಸ್ಕ್ಯಾನ್, ಪ್ರಯೋಗಾಲಯ ಸೇರಿದಂತೆ ಮುಂತಾದ ಸೇವೆ ಲಭ್ಯವಿವೆ.
ಆಸ್ಪತ್ರೆಯ ವಿಭಾಗಗಳು
•ಹೃದ್ರೋಗ, ನೇತ್ರವಿಜ್ಞಾನ, ಅಂಗಾಂಗ ಕಸಿ, ಗ್ಯಾಸ್ಟ್ರೊಎಂಟ್ರಾಲಾಜಿ, ಯುರಾಲಾಜಿ, ನೆಫ್ರೊಲಾಜಿ, ಎಲಬುಕೀಲು, ನರವಿಜ್ಞಾನ, ಮೆಡಿಸಿನ್ ಬೆರಿಯಾಟ್ರಿಕ್ ಸೇರಿದಂತೆ ಹಲವು ವಿಭಾಗಗಳ ಮೂಲಕ ಜನ ಸೇವೆ ನೀಡಲಾಗುತ್ತಿದೆ. ಕೇವಲ ಎರಡು ವರ್ಷಗಳಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಕೇವಲ ಎರಡು ವರ್ಷಗಳಲ್ಲಿ ಹಲವಾರುಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ, ಹಲವಾರು ಜೀವಗಳನ್ನು ಉಳಿಸಲಾಗಿದೆ. ಇಲ್ಲಿಯವರೆಗೆ ಸುಮಾರು 28 ಸಾವಿರಕ್ಕೂ ಅಧಿಕ ಹೊರರೋಗಿಗಳು, 13500ಕ್ಕೂ ಅಧಿಕ ಒಳರೋಗಿಗಳು, ಹೀಗೆ ಒಟ್ಟು 41 ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 6820 ಹೃದಯ ಪ್ರಕ್ರಿಯೆಗಳು, 2358 ಹೃದಯ ಶಸ್ತ್ರಚಿಕಿತ್ಸೆ, 700ಕ್ಕೂ ಅಧಿಕ ನರ ಶಸ್ತ್ರಚಿಕಿತ್ಸೆ, 14 ಟಾವಿ ಪ್ರಕ್ರಿಯೆಗಳು, 300 ಇಆರ್ ಸಿಪಿ, 1400 ಎಂಡೋಸ್ಕೋಪಿ, 1350ಕ್ಕೂ ಅಧಿಕ ಡಯಾಲಿಸಿಸ್ ನೆರವೇರಿಸಲಾಗಿದೆ.
ಸರಕಾರಿ ಮತ್ತು ಸರಕಾರೇತರ ವಿಮಾ ಸಂಸ್ಥೆಗಳ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ಮುಖ್ಯವಾಗಿಸರಕಾರಿ ಯೋಜನೆಗಳಾದ ಆಯುಷ್ಯಮಾನ ಭಾರತ, ಆರೋಗ್ಯ ಕರ್ನಾಟಕ, ಜ್ಯೋತಿ ಸಂಜೀವಿನಿ, ಆರಬಿಎಸಕೆ, ಎನ್ ಡಬ್ಲುಕೆಆರಟಿಸಿ, ಯಶಸ್ವಿನಿ ಸೇರಿದಂತೆ ಖಾಸಗಿಯ ಸುಮಾರು 25ಕ್ಕೂ ಅಧಿಕ ವಿಮಾ ಕಂಪನಿಗಳ ಮೂಲಕ ಸೇವೆ ನೀಡಲಾಗುತ್ತಿದೆ.
ಮಲ್ಲಪ್ಪ ಯಡ್ಡಿ ಆಡಳಿತಾಧಿಕಾರಿಗಳು