ಖಾನಾಪೂರ -ಪಣಜಿ ಮೂಲಕ ಪೀರನವಾಡಿ ಚೋರ್ಲಾ ಮಾರ್ಗದಲ್ಲಿ ಮಲಪ್ರಭಾ ನದಿಯ ಕುಸುಮಳಿ ಬಳಿಯ ಸೇತುವೆಯ ಕಾಮಗಾರಿ ಅಂತಿಮ ಹಂತದಲ್ಲಿ ಇದ್ದು ಈ ಸೇತುವೆ ವಿಕ್ಷಣೆಗೆ ಆಗಮಿಸಿದ ಸಚಿವರನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಂಜಿ ಅವರು ಮಾಲಾರ್ಪಣೆ ಮಾಡಿ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು ತದನಂತರದಲ್ಲಿ ಸೇತುವೆಯ ಕಾಮಗಾರಿ ಇನ್ನೊಂದು ವಾರದಲ್ಲಿ ಪೂರ್ಣಗೊಳಿಸಿ ಭಾರಿ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಲು ಸೂಚನೆ ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಖಾನಾಪೂರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಿಂದ ವಿವಿಧ ಸೌಲಭ್ಯಗಳನ್ನು ಒದಗಿಸುವ ಕುರಿತು ಮನವಿಗಳನ್ನು ಅರ್ಪಿಸಲಾಯಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹುತ್ ಈಶ್ವರ್ ಘಾಡಿ, ಮುಖಂಡರಾದ ಸುರೇಶ್ ಜಾಧವ್,ಗುಡ್ಡುಸಾಬ್ ತೆಕಡಿ, ಭರತೇಶ ತೋರೋಜಿ, ದ್ಯಾಮಣ್ಣ ಬಸರೀಕಟ್ಟಿ, ವಿವೇಕ್ ತಡಕೋಡ ,ಸಾಹೀಶ ಸುತಾರ ಸೇರಿದಂತೆ ಇನ್ನಿತರ ಪ್ರಮುಖ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ