ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ್’ಗೆ ಬೆಂಬಲ ನೀಡುತ್ತಿದ್ದೇವೆಂಬುದು ಸುಳ್ಳು ಸುದ್ಧಿ. ಈ ಬಾರಿಯೂ ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವೆಂದು ಖಾನಾಪೂರ ತಾಲೂಕಿನ ಆಮಟೆ ಪಿ.ಕೆ.ಪಿ.ಎಸ್ ಅಧ್ಯಕ್ಷ ಲಕ್ಷ್ಮಣ ಕಸರಲೇಕರ ಘೋಷಿಸಿದ್ದಾರೆ.
ಸುಳ್ಳು ಸುದ್ಧಿಗಳನ್ನು ಹಬ್ಬಿಸಿ, ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮಾಜಿ ಶಾಸಕ ಅರವಿಂದ ಪಾಟೀಲ್ ಅವರು ನಿರ್ದೇಶಕರಾದ ಬಳಿಕ ನಮಗೆ ಕೃಷಿ ಪತ್ತಿನ ಸಾಲವನ್ನೇ ನೀಡಿಲ್ಲ. ಆದ್ದರಿಂದ ನಮ್ಮ ಪ್ಯಾನೇಲ್ ಅವರ ವಿರುದ್ಧ ಗೆದ್ದು ಬಂದಿದ್ದು, ನಾವು ಅವರಿಗೆ ಈ ಬಾರಿಯೂ ಬೆಂಬಲ ನೀಡುತ್ತಿಲ್ಲ. ಸಮರ್ಪಕ ಅನುದಾನ ನೀಡದ ಹಿನ್ನೆಲೆ ಪತ್ತಿನ ಸಂಸ್ಥೆಯಲ್ಲಿನ ಸಿಬ್ಬಂದಿಗಳಿಗೆ ಕೈಯಿಂದ ಹಣ ಹಾಕಿ ವೇತನ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರವಿಂದ ಪಾಟೀಲ್ ಅವರು ತಡೆ ಹಿಡಿದಿದ್ದ ಹಣವನ್ನು ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರು ಮಂಜೂರುಗೊಳಿಸಿದರು. ಭವಿಷ್ಯದಲ್ಲಿಯೂ ಜನರಿಗೆ ಸಾಲ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆ ಅಮಟಾಪುರ ಸೇರಿದಂತೆ 20-25 ಸಂಘಗಳು ಅರವಿಂದ ಪಾಟೀಲ್ ಅವರಿಗೆ ಬೆಂಬಲ ನೀಡದೇ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಆಮಟೆ ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಕಸರಲೇಕರ ಘೋಷಿಸಿದರು.
ಈ ಸಂದರ್ಭದಲ್ಲಿ ಪ್ಯಾನೇಲ್’ನ ಸದಸ್ಯರಾದ ಸುಭಾಷ್ ಗಾವಡೆ, ನಾರಾಯಣ್ ಪಾಟೀಲ್, ವಿಠ್ಠಲ ನಾಯಿಕ್, ರಾಯಣ್ಣಾ ಗಾವಡೆ, ಜೀಜಾಭಾಯಿ ಬಾಮಣವಾಡಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.