Bagalkot

ಈ ಸರ್ಕಾರ ಡಿಸೆಂಬರ್ 31 ದಾಟೊದಿಲ್ಲ…ಸರ್ಕಾರ ಪತನವಾಗುತ್ತೆ; ಸಂಸದ ಗೋವಿಂದ ಕಾರಜೋಳ ಭವಿಷ್ಯ…

Share

ರಾಜ್ಯ ಕಾಂಗ್ರೆಸ್ ಸರ್ಕಾರ ಡಿಸೆಂಬರ್ 31 ದಾಟೋದಿಲ್ಲ , ಈ ಸರ್ಕಾರ ಪತವಾಗುವುದು ಖಚಿತ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ್ ಕಾರಜೋಳ ಕಾಂಗ್ರೆಸ್ ಸರ್ಕಾರದ ಭವಿಷ್ಯ ವಾಣಿ ನೀಡಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಕಾಂಗ್ರೆಸ್ ಹಿರಿಯ ಶಾಸಕರಾದ ಬಿ.ಆರ್ ಪಾಟೀಲ್, ರಾಯರೆಡ್ಡಿ, ದೇಶಪಾಂಡೆ, ಜಯಚಂದ್ರ ಮೊದಲಾದವರಲ್ಲಿ ಅಸಮಾಧಾನ ತೀವ್ರವಾಗಿದೆ.ಸಿಎಂ ಹುದ್ದೆಗೆ ನಾಲ್ಕು ಗುಂಪುಗಳ ನಡುವೆ ಕಿತ್ತಾಟ ನಡೆಯುತ್ತಿದೆ. “ಸತ್ತ ಹೆಣ ತಿನ್ನಲು ರಣಹದ್ದುಗಳು ಹೇಗೆ ತಕ್ಕಾಟ ಮಾಡ್ತವೋ ಹಾಗೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಹೊಡೆದಾಟ ನಡೆಯುತ್ತಿದೆ,” ಎಂದು ಕಾರಜೋಳ ಟೀಕಿಸಿದರು.

ಇನ್ನು ದಲಿತ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತರು, ಒಕ್ಕಲಿಗರು ಹಾಗೂ ಅಲ್ಪಸಂಖ್ಯಾತರು ತಮ್ಮ ತಮ್ಮ ಸಮುದಾಯದವರಿಗೆ ಸಿಎಂ ಸ್ಥಾನ ಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಡಿಸೆಂಬರ್ 31 ದಾಟೋದಿಲ್ಲ , ಈ ಸರ್ಕಾರ ಪತವಾಗುವುದು ಖಚಿತ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ್ ಕಾರಜೋಳ ಕಾಂಗ್ರೆಸ್ ಸರ್ಕಾರದ ಭವಿಷ್ಯ ವಾಣಿ ನೀಡಿದ್ದಾರೆ.

ಅವರು ಈ ಸರ್ಕಾರವನ್ನು “ಬಂಡ ಸರ್ಕಾರ”ವೆಂದು ಕರೆಯುತ್ತಾ, ಎಸ್‌ಸಿ ಎಸ್‌ಟಿ ಅನುದಾನಗಳನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದರು. “ಕೈಪಕ್ಷದ ಹಿರಿಯ ನಾಯಕರು ಈಗಾಗಲೇ ಈ ಸರ್ಕಾರ ಹೋಗಬೇಕು ಎಂದು ತೀರ್ಮಾನಿಸಿದ್ದಾರೆ,” ಎಂದರು.

Tags:

error: Content is protected !!