BELAGAVI

ಜು. 5 ರಂದು ಶರ್ಮಿಷ್ಠೆ ಏಕವ್ಯಕ್ತಿ ನಾಟಕ ಪ್ರದರ್ಶನ; ಅರವಿಂದ ಕುಲಕರ್ಣಿ

Share

ಜು.5 ರಂದು ರಂಗ ಕಲಾವಿದೆ, ಖ್ಯಾತ ನಟಿ ಉಮಾಶ್ರೀ ಅವರು ಅಭಿನಯಿಸಿರುವ ಶರ್ಮಿಷ್ಠೆ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಲೋಕಮಾನ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಂಗ ಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಹೇಳಿದರು.

ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಮಾಶ್ರೀ ಅವರು ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿ, ಸಚಿವರಾಗಿ ರಾಜ್ಯದ ಜನರ ಮನ ಗೆದ್ದಿರುವ ಅವರು, ಈಗಾಗಲೇ ಈ ನಾಟಕ ಬೆಂಗಳೂರು ಮತ್ತು ಮೈಸೂರದಲ್ಲಿ ಪ್ರದರ್ಶನಗೊಂಡು ಕಲಾಸಕ್ತರ ಮನಸ್ಸನ್ನು ಗೆದ್ದಿದೆ ಎಂದರು. ಉಮಾಶ್ರೀಯವರು ಸುಮರು 40 ವರ್ಷಗಳ ಹಿಂದೆಯೇ ಚಲನಚಿತ್ರರಂಗ ಪ್ರವೇಶ ಮಾಡುವ ಮೊದಲೇ ರಂಗ ಸಂಪದದವರು ಹಮ್ಮಿಕೊಂಡಿದ್ದ 5 ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ. ಮುಂದೆ ಇವರು ಚಿತ್ರರಂಗದ ಮೂಲಕ ಪ್ರಸಿದ್ಧರಾದರು ಎಂದರು.

ಬಹಳ ವರ್ಷಗಳ ನಂತರ ರಂಗ ಸಂಪದ ತಂಡ ಹಮ್ಮಿಕೊಂಡಿರುವ ಶರ್ಮಿಷ್ಠೆ ನಾಟಕದಲ್ಲಿ ಕಾಣಿಸಿಕೊಳ್ಳುತ್ತಿರುವುದು ರಂಗಸಂಪದ ತಂಡಕ್ಕಷ್ಟೆ ಅಲ್ಲ ಬೆಳಗಾವಿ ರಂಗಪ್ರೇಮಿಗಳಿಗೆಲ್ಲ ಸಂಭ್ರಮವನ್ನುಂಟು ಮಾಡಿದೆ ಎಂದರು.
ಮೂಲ ಮರಾಠಿಯ ವಿ.ಸ ಖಾಂಡೇಕರ ಅವರ ಯಯಾತಿ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಮ್.ಇನಾಮದಾರ ಅವರು ಅನುವಾದಿಸಿದ್ದಾರೆ. ಇದರ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡರ ಯಯಾತಿ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ಶರ್ಮಿಷ್ಠೆ. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾವಸ್ತುವಾಗಿದೆ ಎಂದರು.

ರಂಗಸಂಪದ ವಾರ್ಷಿಕ ಪ್ರೇಕ್ಷಕ ಸದಸ್ಯತ್ವವನ್ನು ಹೊಂದಿದವರಿಗೆ ಉಚಿತ ಪ್ರವೇಶವಿದ್ದು ಉಳಿದವರಿಗೆ ಸಹಾಯ ದೇಣಿಗೆ ಒಬ್ಬರಿಗೆ ರೂ.200 ಇರತ್ತದೆ. ದೇಣಿಗೆ ನೀಡಿ ಪ್ರವೇಶ ಪಡೆಯಲಿಚ್ಚಿಸುವವರು 9845025638 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದೆಂದು ಹೇಳಿದರು.
ಪ್ರಸಾದ ಕಾರಜೋಳ, ಅಶೋಕ ಕುಲಕರ್ಣಿ, ರಾಮಚಂದ್ರ ಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!