ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಳವಡಿಸಲಾದ 320 ಸಿಸಿಟಿವಿ ಕ್ಯಾಮರಾಗಳ ಯೋಜನೆ ಈಗ ಕ್ರೈಂ ಪತ್ತೆಗೆ ಅಪಾರ ನೆರವಾಗುತ್ತಿದೆ. ಕೇವಲ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಈ ಯೋಜನೆದಿಂದ ಒಂದೇ ಪ್ರಕರಣದಲ್ಲಿ 53 ಕೋಟಿ ರೂ. ರಿಕವರ್ ಆಗಿದ್ದು, ಪ್ರಾಜೆಕ್ಟ್ ಪ್ರಭಾವವನ್ನು ಸ್ಪಷ್ಟಪಡಿಸಿದೆ.
ವಿಜಯಪುರ ಜಿಲ್ಲೆಯ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಗದ್ದನಕೇರಿ ಬಳಿ ಪತ್ತೆಯಾದ ಖದೀಮರ ವಾಹನವು ಬಾಗಲಕೋಟೆಯ ಬುಲೆಟ್ ಕ್ಯಾಮೆರಾದ ಚಿತ್ರಣದಿಂದ ಪತ್ತೆಯಾಗಿದ್ದು, ಇದರಿಂದಾಗಿ ಪ್ರಕರಣದ ತನಿಖೆಗೆ ಸಹಾಯವಾಗಿದೆ. ಕೇರಳದ ಕೊಲೆ ಪ್ರಕರಣವೊಂದರ ಆರೋಪಿ ಪತ್ತೆಗೆ ಸಹ ಇದೇ ಕ್ಯಾಮೆರಾಗಳು ಸಹಾಯಕವಾಗಿವೆ ಎಸ್ಪಿ ಅಮರನಾಥ್ ರೆಡ್ಡಿ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.
ಇದಲ್ಲದೆ, ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಈ ಕ್ಯಾಮೆರಾಗಳ ಮೂಲಕವೇ ದಂಡ ಫಿಕ್ಸ್ ಆಗುತ್ತಿದೆ. ಹೆಲ್ಮೆಟ್ ಇಲ್ಲದೆ ಸವಾರಿ, ಟ್ರಿಪಲ್ ರೈಡಿಂಗ್, ಮೊಬೈಲ್ ಫೋನ್ ಬಳಕೆ ಎಲ್ಲವನ್ನು ಈ ಅತ್ಯಾಧುನಿಕ ಕ್ಯಾಮೇರಾಗಳು ಪತ್ತೆ ಹಚ್ಚುತ್ತಿವೆ. ನೇರವಾಗಿ ದಂಡದ ನೋಟಿಸ್ ವಾಹನ ಸವಾರರ ಮನೆಗೆ ತಲುಪುತ್ತಿದೆ. ವಸೂಲಿ ಆಗದಿದ್ದರೆ ವಾಹನದ ಮೇಲೆ ಬೋಜಾ ಕೂಡ ಹಾಕುವ ಕ್ರಮ ಕೈಗೆತ್ತಲಾಗಿದೆ.