ವಿಜಯಪುರ: ವಿರೋಧ ಪಕ್ಷದ ನಾಯಕ ಆರ್.ಅಶೋಕ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲು ಹೇಳಿ, ಆರ್ ಅಶೋಕ್ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು, ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಟಾಂಗ್ ನೀಡಿದರು.
ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಸಚಿವರು ದಸರಾ ವೇಳೆಗೆ ಸಿಎಂ ಬದಲಾಗುತ್ತಾರೆ, ನೂತನ ಸಿಎಂ ದಸರಾ ಉದ್ಘಾಟನೆ ಮಾಡುತ್ತಾರೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ತಮ್ಮ ಕುರ್ಚಿ ಬಿಟ್ಟಿದ್ದಾರೆ ಅವರದ್ದೆ ನೆಲೆ ಇಲ್ಲ ಎಂದು ಟಾಂಗ್ ನೀಡಿದರು. ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲು ಹೇಳಿ, ಆರ್ ಅಶೋಕ್ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು, ತಮ್ಮ ಕುರ್ಚಿ ಬಿಟ್ಟಿದ್ದಾರೆ ಅವರದ್ದೆ ನೆಲೆ ಇಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉಹಾಪೋಹಗಳಿಗೆ ಯಾರದ್ದೇ ಹೇಳಿಕೆಗೆ ಬೆಲೆ ಇಲ್ಲಾ, ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಅಂತಿಮ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂದಿ ರಾಹುಲ್ ಗಾಂಧಿ, ಸಿಡ್ಲ್ಯೂಸಿ ಕಾಲಕಾಲಕ್ಕೆ ನಿರ್ಧಾರ ಮಾಡುತ್ತಾರೆ ಎಂದರು. ಯಾರದ್ದೇ ಹೇಳಿಕೆ ಮಾದ್ಯಮ ಹೇಳಿಕೆ ಎಂ ಬಿ ಪಾಟೀಲ್ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವಿಲ್ಲಾ ಎಂದು ಸ್ಪಷ್ಟಪಡಿಸಿದರು. ಇನ್ನೂ ಸಿಎಂ ಅಧಿಕಾರ ಎರಡೂವರೆ ವರ್ಷ ಹಂಚಿಕೆ ಆಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನಿಮ್ಮ ಮುಂದೆ ಮಾತುಕತೆ ಆಗಿದೆಯಾ? ನಿಮಗೆ ಗೊತ್ತಾ? ಅಗ್ರಿಮೆಂಟ್ ಆಗಿದೆಯಾ ಎಂದು ಸಚಿವ ಎಂ ಬಿ ಪಾಟೀಲ್ ಪ್ರಶ್ನಿಸಿದರು. ಇನ್ನೂ ಸಂವಿಧಾನದಲ್ಲಿ ಜ್ಯಾತ್ಯಾತೀತ ಹಾಗೂ ಸಮಾಜವಾದ ಶಬ್ದಗಳು ಇರಬಾರದು ಎಂದು ಆರ್ ಎಸ್ ಎಸ್ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಮಾಜವಾದ ಜ್ಯಾತ್ಯಾತೀತ ಇದ್ದರೆ ತಪ್ಪೇನು? ಬಸವಣ್ಣ ಬಸವಾದಿ ಶರಣರು ಬುದ್ದ ನಾರಾಯಣಗುರು ಸ್ವಾಮಿ ವಿವೇಕಾನಂದರು ಜ್ಯಾತ್ಯಾತೀತತೆ ಹೇಳಿದ್ದಾರೆ. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟವೆಂದರು, ಸೆಕ್ಯೂಲರ್ ಪದದಲ್ಲಿ ತಪ್ಪೆನಿದೆ
ಹಾಗಾದರೆ ಕಮ್ಯೂನಲ್ ಪದ ಸೇರಿಸಬೇಕಾ? ನಾವು ಕೋಮು ವಾದಿಗಳು ಎಂದು ಜೋರಾಗಿ ಹೇಳಬೇಕಾ ಎಂದು ಪ್ರಶ್ನಿಸಿದರು. ಸಮಾಜವಾದ ಹಾಗೂ ಜ್ಯಾತ್ಯಾತೀತ ಪದಗಳಿಂದ ಸಂವಿಧಾನ ಮತ್ತಷ್ಟು ಬಲವಾಗುತ್ತದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವುದು ಬೇರೆ ಕಾರಣಕ್ಕಾಗಿ, ಮನುವಾದ ಮನುಸೃತಿಗಾಗಿ, ನಾವು ಭಾರತ ರಾಷ್ಟ್ರವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನಲು, ಜ್ಯಾತ್ಯಾತೀತ ಹಾಗೂ ಸಮಾನವಾದ ಪದ ಸೇರಿಸಿರ ಬಹುದು ತಪ್ಪೇನು ಮಾಡಿಲ್ಲಾ, ದೇಶಕ್ಕೆ ಹಾನಿಯಾಗುವಂತದ್ದು ಮಾಡಿಲ್ಲಾ, ಎಲ್ಲ ಜಾತಿ ವರ್ಗ ಸರಿ ಸಮನಾಗಿ ಕಾಣುವಂಥದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅರ್ಥವೂ ಅದೇ ಇತ್ತು ಎಂದರು. ಹೊಸಬಾಳೆಯವರು ಟೆಕ್ನಿಕಲ್ ಆಗಿ ಮಾತನಾಡುತ್ತಿದ್ದಾರೆಂದರು. ಇನ್ನೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ರಾಜ್ಯ ಪ್ರವಾಸದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ರಾಜ್ಯ ಉಸ್ತುವಾರಿ ಆಗಮನಿಸುತ್ತಿದ್ದಾರೆ, ಅದು ಅವರ ಕರ್ತವ್ಯ ಎಂದರು. ರಾಜ್ಯ ಉಸ್ತುವಾರಿಗ ಳು ಅವಾಗವಾಗ ಆಗಮಿಸಿ ಸಭೆಗಳನ್ನು ಮಾಡುತ್ತಾರೆ. ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ವೀಕ್ಷಣೆ ಮಾಡುವುದು ಸಾಮಾನ್ಯ ಎಂದರು. ಇನ್ನೂ ಶಾಸಕರು ಅಸಮಾಧಾನ ಹೊರ ಹಾಕಿರುವ ನಿಟ್ಟಿನಲ್ಲಿ ಆಗಮಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಹಾಗೇನಿಲ್ಲ ಯಾವಾಗಲೂ ಬರ್ತಾಯಿರ್ತರೆ, ಎಲ್ಲರ ಅಭಿಪ್ರಾಯ ಕೇಳುತ್ತಾರೆ, ಸರ್ಕಾರ ಹೇಗೆ ನಡೆಯುತ್ತಿದೆ, ಪಕ್ಷ ಸಂಘಟನೆ ಹೇಗೆ ಆಗುತ್ತಿದೆ ಹಾಗೂ ಪಕ್ಷದ ಕಾರ್ಯಕ್ರಮಗಳ ಕುರಿತು ರಿವಿಲ್ ಮಾಡುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.