BELAGAVI

ತಂದೆ-ತಾಯಿಯರನ್ನು ಪೂಜ್ಯನೀಯವಾಗಿ ಕಾಣಿ; ಶಾಸಕ ಅಭಯ್ ಪಾಟೀಲ್

Share

ವಿದ್ಯಾರ್ಥಿಗಳ ಸಾಧನೆಗೆ ಗುರುಗಳು ಬೋಧಕರಾಗಿರ ಬಹುದು ಆದರೇ, ವಿದ್ಯಾರ್ಥಿಗಳ ಬೆನ್ನೆಲುಬಾಗಿ ನಿಲ್ಲುವವರು ತಂದೆ-ತಾಯಿಯರು ಅವರನ್ನು ಯಾವತ್ತು ಸನ್ಮಾನನೀಯ ಸ್ಥಾನದಲ್ಲಿಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು.

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ವತಿಯಿಂದ 2025ನೇ ಸಾಲಿನಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕ ಅಭಯ್ ಪಾಟೀಲ್, ನಗರಸೇವಕ ನಿತೀನ್ ಜಾಧವ್, ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ್, ದಕ್ಷಿಣ ಬಿಜೆಪಿ ಅಧ್ಯಕ್ಷ ರಾಜಕುಮಾರ್ ಪಾವಲೆ, ಮಹೇಶ್ ಶಿರಹಟ್ಟಿ ಇನ್ನುಳಿದವರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು, 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ತೀರ್ಣರಾದ ಸುಮಾರು 1400 ವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನು ಸನ್ಮಾನಿಸಲು 3 ದಿನಗಳ ಕಾಲ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಯಶಸ್ಸಿಗೆ ಅವರ ಗುರುಗಳಷ್ಟೇ ಬೆನ್ನೆಲುಬಾಗಿ ನಿಂತಿರುವುದು ಅವರ ತಂದೆ-ತಾಯಿಯರು. ಪಾಲಕರ ಬೆಂಬಲವಿಲ್ಲದೇ, ವಿದ್ಯಾರ್ಥಿಗಳು ಸಾಧನೆಯನ್ನು ಮಾಡುವುದು ಕಷ್ಟ ಸಾಧ್ಯ. ವಿದ್ಯಾರ್ಥಿನಿಯರೇ ಹೆಚ್ಚಾಗಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಭವಿಷ್ಯದ ಕಾಲೇಜು ದಿನಗಳಲ್ಲಿಯೂ ಒಳ್ಳೆಯ ಶಿಕ್ಷಣ ಪಡೆದು, ತಂದೆ ತಾಯಿಯರ ಕನಸನ್ನು ನನಸಾಗಿಸಬೇಕು. ತಂದೆ-ತಾಯಿ ಮತ್ತು ಗುರುಗಳನ್ನು ಯಾವತ್ತು ಆದರದಿಂದ ಕಾಣಬೇಕೆಂದರು.

ಇನ್ನು ನಗರಸೇವಕ ನಿತೀನ್ ಜಾಧವ್ ಅವರು, ಕರ್ನಾಟಕದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿ ಮತ್ತು ಅವರ ಪಾಲಕರನ್ನು ಸತ್ಕರಿಸುವ ಕಾರ್ಯವನ್ನು ಶಾಸಕ ಅಭಯ್ ಪಾಟೀಲ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಉಚ್ಛ ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.

ಇನ್ನು ಬಿಜೆಪಿ ನಗರಾಧ್ಯಕ್ಷ ಗೀತಾ ಸುತಾರ್ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮಾತ್ರ ಸನ್ಮಾನಿಸಲಾಗುತ್ತದೆ. ಆದರೇ ಶಾಸಕ ಅಭಯ್ ಪಾಟೀಲ್ ಅವರು ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರನ್ನು ಸನ್ಮಾನಿಸಿರುವುದು ತುಂಬಾ ವಿಶೇಷ. ಶಾಸಕ ಅಭಯ್ ಪಾಟೀಲ್ ಅವರ ಕಾರ್ಯಗಳೆಲ್ಲವು ವಿನೂತನವಾಗಿರುತ್ತವೆ. ಮಹಿಳೆಯರಿಗೆ ಪಿಎಂ ಮೋದಿ ದೇಶದಲ್ಲಿ ಉನ್ನತ ಸ್ಥಾನಮಾನ ನೀಡಿದ ನೀತಿಯನ್ನು ಶಾಸಕ ಅಭಯ್ ಪಾಟೀಲ್ ಕೂಡ ಮುಂದುವರೆಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ನೀಡಿರುವುದು ಪ್ರಶಂಸನೀಯ ಎಂದರು.

4 ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ ಸುಮಾರು 1400 ವಿದ್ಯಾರ್ಥಿಗಳನ್ನು ಸನ್ಮಾನಿಸುವ ಉದ್ಧೇಶವನ್ನು ಹೊಂದಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!