Belagavi

ಬೆಳಗಾವಿ ಜಿಲ್ಲಾ ನ್ಯಾಯಾಲಯ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ 11ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ

Share

ಬೆಳಗಾವಿ ಜಿಲ್ಲಾ ನ್ಯಾಯಾಲಯ, ಕಾನೂನು ಸೇವಾ ಪ್ರಾಧಿಕಾರ ಹಾಗೂ ಬೆಳಗಾವಿ ವಕೀಲರ ಸಂಘದ ಸಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗಾ ದಿನವನ್ನು ಆಚರಿಸಲಾಯಿತು

ಕಪ್ಪು ಕೋಟು ಧರಿಸಿ ಕಾನೂನು, ಕಟಕಟೆ,ಕಕ್ಷಿದಾರ ಎಂಬ ಗೊಂದಲದಲ್ಲೇ ದಿನವಿಡೀ ಕಳೆಯುತ್ತಿದ್ದ ವಕೀಲರು ಶನಿವಾರ ಬೆಳಗ್ಗೆ ಶ್ವೇತ ವಸ್ತ್ರದಾರಿಗಳಾಗಿ ವಕೀಲರ ಭವನದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿದ್ದರು. ಯೋಗ ದಿನಾಚರಣೆಯನ್ನು ಜಿಲ್ಲಾ ನ್ಯಾಯಾಧೀಶ ಟಿ ಎನ್ ಇನವಳ್ಳಿ ಉದ್ಘಾಟಿಸಿ ಮಾತನಾಡಿ, ಯೋಗವೆಂದರೆ ವ್ಯಾಯಾಮವಲ್ಲ, ಯಮನಿಯಮ ಆಸನದಿಂದ ಆರಂಭವಾಗುತ್ತದೆ.

ಋಗ್ವೇದ ಪತಂಜಲಿ ಭಗವದ್ಗೀತೆಯಲ್ಲಿ ಯೋಗದ ಬಗ್ಗೆ ಪ್ರಸ್ತಾಪವಿದೆ. ಜೀವನ ಧರ್ಮ ಹೇಗಿರಬೇಕು ಎಂಬುದಕ್ಕೆ ಯೋಗ ಮಾರ್ಗದರ್ಶನ ನೀಡುತ್ತದೆ. ಎಲ್ಲ ಯಶಸ್ಸಿನ ಹಿಂದೆ ಸಂತೋಷ ತುಂಬಲು ಮನಸ್ಸಿನ ಅಗತ್ಯವಿದ್ದು ಮನಸ್ಸು ನಿಯಂತ್ರಿಸಲು ಪ್ರತಿನಿತ್ಯ ಯೋಗವನ್ನು ಮಾಡಬೇಕು.
ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಸ್ ಕಿವಡಸನ್ನವರ ಅಧ್ಯಕ್ಷತೆ ವಹಿಸಿದ್ದರು. ಯೋಗ ಗುರು ಗಿರೀಶ್ ಭಂಡಾರಿ ಯೋಗಾಸನ ಪ್ರದರ್ಶನ ಮಾಡಿದರು. ಕಾನೂನು ಶಿವಪ್ಪ ಅಧಿಕಾರದ ಕಾರ್ಯದರ್ಶಿ ಸಂದೀಪ್ ಪಾಟೀಲ್, ವಕೀಲರ ಸಂಘದ ಕಾರ್ಯದರ್ಶಿ ವೈ ಕೆ ದಿವಟೆ ಪದಾಧಿಕಾರಿಗಳು ಹಾಗೂ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಭಂಗಿಗಳಲ್ಲಿ ಯೋಗಾಸನ ಮಾಡಿದರು.

Tags:

error: Content is protected !!