ಇತ್ತೀಚೆಗೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರ ವರ್ಗಾವಣೆ ಆದೇಶ ಆಗಾಗ ಬದಲಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿಯೇ ವರ್ಗಾವಣೆ ಆದೇಶ ಬದಲಾಗುತ್ತಲೇ ಇರುತ್ತವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದಲ್ಲಿ ಈ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರೆ ನೀಡಿದ ಲಾಡ್ ಅವರು, ಕೆಲವು ಸಲ ವರ್ಗಾವಣೆ ವಿಚಾರದಲ್ಲಿ ಆದೇಶಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಯಾವ ಆಫೀಸರ್ ಬಂದರೆ ಆ ವ್ಯವಸ್ಥೆಗೆ ಹೊಂದಿಕೊಂಡು ಕೆಲಸ ಮಾಡುತ್ತಾರೋ ಅದನ್ನು ನೋಡಿಕೊಳ್ಳಬೇಕಾಗುತ್ತದೆ. ಕೆಲವು ಸಲ ಬದಲಾವಣೆ ಮಾಡುವಾಗ ಒತ್ತಾಯಗಳೂ ಬಂದಿರುತ್ತವೆ. ವರ್ಗಾವಣೆಯಾಗುವಾಗ ಇಂತಹ ಬದಲಾವಣೆ ಆಗುತ್ತಿರುತ್ತವೆ ಎಂದರು.