ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಆದರೆ ಕೆಲ ಗೊಂದಲಗಳು ನಿವಾರಣೆಯಾಗಿವೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು
ಬೆಳಗಾವಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ
ಯಾವುದೇ ರೀತಿಯ ರಾಜಕೀಯ ಚರ್ಚೆಗಳು ನಡೆದಿಲ್ಲವಾದರೂ ಕೆಲ ಗೊಂದಲಗಳು ನಿವಾರಣೆ ಆಗಿವೆ ಇನ್ನೂ ಸಣ್ಣ ಪುಟ್ಟ ವಿಚಾರ ಇತ್ಯರ್ಥ ಆಗಲಿವೆ ಎಂದರು.
ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಆಡಿಯೋ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಸಿದ ಅವರು, ಈ ಹಿಂದೆ ರಾಯರೆಡ್ಡಿ ದೊಡ್ಡ ಭ್ರಷ್ಟಾಚಾರ ಇದೆ ಎಂದು ಹೇಳಿದ್ದರು. ಈಗ ಶಾಸಕ ಬಿ ಆರ್ ಪಾಟೀಲ ಸಚಿವ ಜಮೀರ್ ಅವರ ಆಪ್ತ ಸಹಾಯಕನ ಜೊತೆಗೆ ಮಾತನಾಡಿದ ಆಡಿಯೋ ವೈರಲ್ ಆಗಿದೆ
ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹಣ ಕೊಟ್ಟವರಿಗೆ ಮನೆಗಳು ಸಿಗುತ್ತಿವೆ ಹಣ ಕೊಟ್ಟರೇ ಎಲ್ಲಾ ಕೆಲಸ ಆಗುತ್ತೆ ಎನ್ನುವುದು ಇದರಿಂದ ಗೊತ್ತಾಗಿದೆ.
ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದರು ಇದೀಗ ಈ ಸರ್ಕಾರದ ಭ್ರಷ್ಟಾಚಾರ ಸಾಬೀತಾಗಿದೆ ಎಂದರು
ಕಂದಾಯ ಮಂತ್ರಿ ಬೈರೇಗೌಡ ತಹಶಿಲ್ದಾರ ಕಚೇರಿಗೆ ಭೇಟಿ ಕೊಟ್ಟಿದ್ದಾರೆ.ಹಣ ಕೊಟ್ಟವರ ಕೆಲಸ ಬೇಗ ಆಗುತ್ತೆ ಎಂದು ಸಾರ್ವಜನಿಕರು ದೂರಿದ್ದಾರೆ
ತಹಶಿಲ್ದಾರ ಕಚೇರಿ ಈ ಕೆಲಸಕ್ಕೆ ಇಷ್ಟು ಹಣ ಎಂದು ಬೋರ್ಡ್ ಹಾಕಿ ಅಂತ ಸ್ವತಃ ಕಂದಾಯ ಸಚಿವರೇ ಹೇಳಿದ್ದಾರೆ. ಬಿ ಆರ್ ಪಾಟೀಲ್ ಹೇಳಿಕೆ ನೋಡಿದ್ರೆ.ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಅನಿಸುತ್ತದೆ ಸಿದ್ದರಾಮಯ್ಯ ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಆದಷ್ಟು ಬೇಗ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದು ಸಂಸದ ಜಗದೀಶ್ ಶೆಟ್ಟರ್ ಕುಟುಕಿದರು