ಕೆರೆಯಲ್ಲಿ ಬಿದ್ದು ಅವಳಿ ಮಕ್ಕಳ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ಹಾಗೂ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್ ಸಾಂತ್ವನ ಹೇಳಿದರು.
ಇಂದು ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಸಂತೋಷ್ ಲಾಡ್ ಅವರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಈ ಸಂದರ್ಭದಲ್ಲಿ ಕೆರೆಗೆ ತಡೆಗೋಡೆ ಅಥವಾ ತಂತಿ ಬೇಲಿ ಹಾಕದಿರೋದ್ರಿಂದ ದುರ್ಘಟನೆ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಜನರು ಕಿಡಿಕಾರಿದರು. ಕೆರೆ ಸುತ್ತ ತಂತಿ ಬೇಲಿ ಹಾಕಿಸುವಂತೆ ಸಂತೋಷ್ ಲಾಡ್ ಗೆ ಗ್ರಾಮಸ್ಥರ ಆಗ್ರಹಿಸಿದರು.
ನಂತರ ಸಚಿವ ಸಂತೋಷ್ ಲಾಡ್ ಅವರು ಅವಳಿ ಮಕ್ಕಳು ಮೃತಪಟ್ಟ ಕುಟುಂಬಕ್ಕೆ ಭೇಟಿನೀಡಿ ಸಾಂತ್ವನ ಹೇಳಿ ತಮ್ಮ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ 4 ಲಕ್ಷ ರೂ ಪರಿಹಾರವನ್ನು ನೀಡಿದರು. ನಂತರ ಮಾತನಾಡಿದ ಅವರು .ಮೃತ ಮಕ್ಕಳ ಕುಟುಂಬದ ಸದಸ್ಯರನ್ನ ಭೇಟಿ ಮಾಡಿದೆ. ಘಟನೆಗೆ ಯಾರು ಹೊಣೆ ಬಗ್ಗೆ ಚರ್ಚೆ ಮಾಡುವುದು ಸಮಯ ಅಲ್ಲ ಎಂದರು. ಅಂಗನವಾಡಿ ಶಾಲೆಗೆ ಹೋದ ಮಕ್ಕಳು ಕೆರೆಯಲ್ಲಿ ಜಾರಿ ಸಾವನ್ನಪ್ಪಿದ್ದಾರೆ. ಘಟನೆಗೆ ಬಗ್ಗೆ ಸಹ ಮಾಹಿತಿ ಕಲೆ ಹಾಕತಾ ಇದ್ದೇನೆ. ಮತ್ತೇ ಬೇರೆ ಘಟನೆ ನಡೆಯಬಾರದು ಮುಂಜಾಗ್ರತಾ ಕ್ರಮ ಅಗತ್ಯ ಎಂದರು.
ಈಗ ಯರಿನಾರಾಯಣಪುರ ಗ್ರಾಮ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಸೂಚನೆ ನೀಡಿದ್ದೇನೆ ಎಂದರು. ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಸರಕಾರದಿಂದ ಪರಿಹಾರ ನೀಡುವ ಕುರಿತು ಚಿಂತನೆ ಇದೆ ಎಂದರು.