ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಚಿನ್ನ ಬೆಳ್ಳಿ ಹಾಗೂ ನಗದು ಹಣ ದೋಚ್ಚುತ್ತಿದ್ದ ಆರು ಜನ ಚಾಲಾಕಿ ಕಳ್ಳರನ್ನು ಬಂಧಿಸುವಲ್ಲಿ ಧಾರವಾಡ ನವಲಗುಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನವಲಗುಂದ ಒಟ್ಟಣದ ಗುಡ್ಡದಕೇರಿ ಓಣಿಯ 19 ವಯಸ್ಸಿನಿಂದ 23 ವಯಸ್ಸಿನ 5 ಜನ ಹಾಗೂ 34 ವರ್ಷದ ಓರ್ವ ವ್ಯಕ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 26 ಲಕ್ಷದ 28 ಸಾವಿರ ರೂಪಾಯಿ ಮೌಲ್ಯದ 267 ಗ್ರಾಂ ಚಿನ್ನ, 470 ಗ್ರಾಂ ಬೆಳ್ಳಿ ಹಾಗೂ ಎರಡು ಬೈಕಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧಿತ ಆರೋಪಿಗಳು ನವಲಗುಂದ ಸೇರಿ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಮನೆಗಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿದೆ. ಸದ್ಯ ಆರು ಜನ ಆರೋಪಿಗಳ ವಿಚಾರಣೆ ಪೂರ್ಣಗೊಂಡ ಬೆನ್ನಲ್ಲೇ ಈಗ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ಕಂಬಿ ಹಿಂದೆ ತಳ್ಳಲಾಗಿದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧಾರವಾಡ ಜಿಲ್ಲೆ ನವಲಗುಂದ ಪೊಲೀಸರ ಕಾರ್ಯಾಚರಣೆ
ಮನೆ ಕಳ್ಳತನ ಮಾಡುತಿದ್ದ ಆರು ಆರೋಪಿಗಳ ಬಂಧನ
ಧಾರವಾಡ ಜಿಲ್ಲೆಯ ನವಲಗುಂದ, ಬೆಳಗಾವಿ ಜಿಲ್ಲೆಯ ಸವದತ್ತಿ ಸೇರಿ ಹಲವು ಕಡೆ ನಡೆದಿದ್ದ ಕಳ್ಳತನ
ಬಂಧಿತರಿಂದ ಒಟ್ಟು 26 ಲಕ್ಷ ಮೂಲ್ಯದ ಚಿನ್ನ ಸೇರಿ ಹಲವು ವಸ್ತು ವಶಕ್ಕೆ
267 ಗ್ರಾಂ ಚಿನ್ನ, 470 ಗ್ರಾಂ ಬೆಳ್ಳಿ ಹಾಗೂ 2 ಬೈಕ್ ವಶಕ್ಕೆ
ನವಲಗುಂದ ಹಾಗೂ ಸವದತ್ತಿ ಭಾಗದಲ್ಲಿ ತಲೇ ನೋವಾಗಿದ್ದ ಈ ಕಳ್ಳರ ಗ್ಯಾಂಗ್
ಸದ್ಯ ಕಳ್ಳರನ್ನ ಬಂಧಿಸಿ ಜೈಲಿಗೆ ಅಟ್ಟಿದ ನವಲಗುಂದ ಪೊಲೀಸರು