ಚಿಕ್ಕೋಡಿ: ಶಾಸಕ ಗಣೇಶ ಹುಕ್ಕೇರಿ,ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ವಿಶೇಷ ಪ್ರಯತ್ನದಿಂದ 32 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಯಡೂರ-ಕಲ್ಲೋಳ ಬ್ಯಾರೇಜ್ ಶ್ರೀಘ್ರವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಯಡೂರ ಗ್ರಾಮ ಪಂಚಾಯತ ಅಧ್ಯಕ್ಷೆ ಸಂತೋಷಿ ಮಚೇಂದ್ರ ಧನಗರ ಹೇಳಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಹಳೆಯ ಬ್ಯಾರೇಜ್ ಕೊಚ್ಚಿಹೋಗಿದ್ದರಿಂದ ಜನರಿಗೆ ಬಹಳಷ್ಟು ಅನಾನುಕೂಲವಾಗಿತ್ತು. ಇದರಿಂದಾಗಿ ನಮ್ಮ ನಾಯಕರಾದ ಗಣೇಶ ಹುಕ್ಕೇರಿ, ಪ್ರಕಾಶ ಹುಕ್ಕೇರಿ ಅವರು ಅತ್ಯಂತ ಮುತುವರ್ಚಿವಹಿಸಿ 32 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಹೊಸದಾಗಿ ಬ್ಯಾರೇಜ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅವರಿಗೆ ನಮ್ಮ ಯಡೂರ ಗ್ರಾಮಸ್ಥರಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ಸದ್ಯ ನೂತನವಾಗಿ ನಿರ್ಮಾಣಗೊಂಡ ಯಡೂರ-ಕಲ್ಲೋಳ ಬ್ಯಾರೇಜ್ ವು 2 ಟಿಎಂಸಿ ನೀರು ಸಂಗ್ರಹದ ಸಾಮಥ್ರ್ಯವನ್ನು ಹೊಂದಿದೆ.ಇದು ನಮ್ಮ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.ಅದಲ್ಲದೇ ಕಲ್ಲೋಳ,ಯಕ್ಸಂಬಾ,ಚಿಕ್ಕೋಡಿ ಪಟ್ಟಣಕ್ಕೆ ಹೋಗುವ ಜನರಿಗೆ ಉಪಯೋಗವಾಗಲಿದೆ ಎಂದರು.
ಬಳಿಕ ಡಾ.ರಾಜು ಚವಾನ ಮಾತನಾಡಿ ಯಡೂರ-ಕಲ್ಲೋಳ ಬ್ಯಾರೇಜ ವು ಹೊಸದಾಗಿ ನಿರ್ಮಾಣ ಆಗಬೇಕೆಂದು ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರಲ್ಲಿ ಮನವಿಯನ್ನು ಮಾಡಿಕೊಂಡಿದವು.ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಿ 32 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಯು ಮುಕ್ತಾಯಗೊಂಡು ಸುಂದರ,ಸುಸಜ್ಜಿತವಾದ ಬ್ಯಾರೇಜ್ ನಿರ್ಮಾಣವಾಗಿದೆ ಹಾಗೂ ಶ್ರೀ ಕ್ಷೇತ್ರ ಯಡೂರ ದೇವಸ್ಥಾನಕ್ಕೆ ಬರಲು ಅನೇಕ ಲಕ್ಷಾಂತರ ಭಕ್ತರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಬಳಿಕ ಕಾಂಗ್ರೆಸ್ ಮುಖಂಡರಾದ ಶಿವಾನಂದ ಕರೋಶಿ ಹಾಗೂ ಮಹೇಶ ಕಾಗವಾಡೆ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ಪ್ರಯತ್ನದಿಂದ 32 ಕೋಟಿ ರೂಪಾಯಿ ವೆಚ್ಚದಲ್ಲಿ ಯಡೂರ-ಕಲ್ಲೋಳ ಬ್ಯಾರೇಜ್ ನಿರ್ಮಾಣವಾಗಿದೆ.ಆದಷ್ಟು ಬೇಗ ಈ ಬ್ಯಾರೇಜ್ ವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಸುರೇಶ ಕಾಗವಾಡೆ, ಮಹೇಶ ಕಾಗವಾಡೆ, ಶಿವಾನಂದ ಕರೋಶಿ, ಸುಬೋದ ಜೋಶಿ, ಪೋಪಟ ನರವಾಡೆ, ತಮ್ಮಣ್ಣ ಕರೋಶಿ, ಯಾಶಿನ ನದಾಫ್, ಲಕ್ಷ್ಮಣ ಅಮ್ಮಣಗಿ, ವಿನೋದ ಕಾಗವಾಡೆ, ವಿಜಯ ಜಾಧವ, ಡಾ!ರಾಜು ಚವಾನ, ರಮೇಶ ಒಂಟೆ, ಮಚೇಂದ್ರ ಧನಗರ, ಅಜೀತ ಕಿಲ್ಲೆದಾರ, ಕಿಟಳ ಯಲವಂತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.