Vijaypura

ಕಳ್ಳಬಟ್ಟಿ ಅಡ್ಡೆಗಳ ಅಬಕಾರಿ ಅಧಿಕಾರಿಗಳ ದಾಳಿ; ಅಪಾರ ಪ್ರಮಾಣದ ಕಳ್ಳಬಟ್ಟಿ ನಾಶ

Share

ಕಳ್ಳ ಬಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆಯಿಂದ ದಾಳಿ ನಡೆಸಲಾಗಿದೆ‌. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಿವಿಧ ತಾಂಡಾಗಳಲ್ಲಿ ದಾಳಿ ನಡೆಸಲಾಯಿತು.

ಖದೀಮರು ರಾಜಾ ರೋಷವಾಗಿ ಕಳ್ಳ ಬಟ್ಟಿ ಸಾರಾಯಿ ದಂಧೆ ನಡೆಸುತ್ತಿದ್ದರ ಕುರಿತು ಖಚಿತ ಮಾಹಿತಿ ಮೇರೆಗೆ ಬಸವನ ಬಾಗೇವಾಡಿ ಅಬಕಾರಿ ಇನ್ಸ್ಪೆಕ್ಟರ್ ವಿಠ್ಠಲ್ ಜೀರಂಕಲಗಿ ನೇತೃತ್ವದಲ್ಲಿ ದಾಳಿ ನಡೆಸಿ ಮುಳವಾಡ ಎಲ್ ಟಿ-2 ಯಲ್ಲಿ ಕಬ್ಬಿನ ಹೊಲದಲ್ಲಿ ಸುಮಾರು 17 ಬ್ಯಾರಲ್ ತುಂಬಿದ ಕಳ್ಳ ಬಟ್ಟಿ ಸಾರಾಯಿ ತಯಾರಿಸುತ್ತಿದ್ದ ಬೆಲ್ಲದ ರಸವನ್ನು ನಾಶ ಪಡಿಸಲಾಯಿತು.

ಇನ್ನೂ ಕುರುಬರದಿನ್ನಿ ತಾಂಡಾದಲ್ಲಿ ಸುಮಾರು 30-35 ಕೊಡಗಳಲ್ಲಿ ತುಂಬಿದ ಸಾರಾಯಿ ತಯಾರಿಸುತ್ತಿದ್ದ ಬೆಲ್ಲದ ರಸವನ್ನು ನಾಶ ಪಡಿಸಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಅಬಕಾರಿ ಪೊಲೀಸರಿಂದ ಬಲೆ ಬೀಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!