hubbali

ಸಿಎಂ ಬದಲಾವಣೆ ಪ್ರಸ್ತಾಪ ಆಗೇ ಇಲ್ಲಾ : ಶಾಸಕ ಪ್ರಸಾದ ಅಬ್ಬಯ್ಯ

Share

ಸಿಎಂ ಬದಲಾವಣೆ ಪ್ರಸ್ತಾಪ ಆಗೇ ಇಲ್ಲಾ. ಸುಮ್ಮನೆ ಬೇರೆ ಬೇರೆಯವರು ಏನೇನೋ ಮಾತಾಡ್ತಾರೆ. ಏನೇ ಇದ್ರು ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಸಚಿವ ಸಂಪುಟ ಪುನರ್ ರಚನೆ ಆದ್ರೆ ನಾವು ಕೂಡ ಸಚಿವ ಆಕಾಂಕ್ಷಿ ಇದ್ದೇನೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು ನಾನು ಮೂರು ಬಾರಿ ನನ್ನ ಕ್ಷೇತ್ರದ ಜನ ನನ್ನನ್ನ ಆರಿಸಿ ಕಳಿಸಿದ್ದಾರೆ. ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದ ಸದ್ಯಕ್ಕೆ ಪಕ್ಷದಲ್ಲಿ ಪುನರ್ ರಚನೆ ಬಗ್ಗೆ ಚರ್ಚೆ ಆಗ್ತಿಲ್ಲಾ ಎಂದರು.

ಜನಗಣತಿಗೆ ಹೈಕಮಾಂಡ್ ಸೂಚನೆ ವಿಚಾರ

ಜನಗಣತಿ ಜೊತೆಗೆ ಜಾತಿ ಸರ್ವೇ ಆಗಬೇಕು ಅನ್ನೋದು ನಮ್ಮ ಉದ್ದೇಶ. ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ ಆಗಬೇಕು ಅಂಬೇಡ್ಕರ್, ಬಸವಣ್ಣ ಅವರ ಕನಸ್ಸು ಇದು ಕೆಲವು ಸಮುದಾಯಗಳಲ್ಲಿ ಸಮೀಕ್ಷೆಯಲ್ಲಿ ಸರಿ ಆಗಿಲ್ಲ ಅನ್ನೋ ಕೂಗು ಇತ್ತು. ಅಹಿಂದ ಅಂದ ಕೂಡಲೇ ಸಿದ್ದರಾಮಯ್ಯ ಅಹಿಂದ ವರ್ಗವನ್ನಷ್ಟೇ ಕರೆದುಕೊಂಡು ಹೋಗುವುದಲ್ಲ. ಮುಖ್ಯಮಂತ್ರಿ ಆಗಿ ಎಲ್ಲಾ ಸಮುದಾಯವನ್ನ ತೆಗೆದುಕೊಂಡು ಹೋಗೋ ನಾಯಕರು. ಸಮೀಕ್ಷೆಯನ್ನ ವಿರೋಧ ಮಾಡಿದ ಕೇಂದ್ರ ಸರ್ಕಾರ ನಮ್ಮನ್ನೇ ಕಾಪಿ ಮಾಡ್ತಾ ಇದ್ದಾರೆ ನಮ್ಮ ಗ್ಯಾರೆಂಟಿ ಕೊಟ್ಟಾಗ ಬೊಬ್ಬೆ ಹೊಡದ್ರು, ದಿವಾಳಿ ಆಗ್ತಾರೆ ಅಂತ ಎಂದರು. ಎಲ್ಲಾ ಅಭಿವೃದ್ಧಿ ಕೆಲಸಗಳೊಂದಿಗೆ ಈಗ ಬಹಳ ಸಕ್ಸಸ್ ಆಗಿದೆ . ಜಾತಿಗಣತಿಗೆ ವಿರೋಧ ಮಾಡಿದವರು ಈಗ ಒಪ್ಪಿಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಯೋಜನೆ ದೇಶಕ್ಕೆ ಮಾಡೆಲ್ ಎಂದರು.

Tags:

error: Content is protected !!