ಬಾಗಲಕೋಟೆ: ನರ್ಸ ಸೋಗಿನಲ್ಲಿ ಬಂದು ಹಸುಗೂಸನ್ನ ಕಳುವು ಮಾಡಿದ ಬೆಚ್ಚಿ ಬೀಳಿಸುವ ಘಟನೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ರೂಪದಲ್ಲಿ ಬಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಸುಗೂಸನ್ನು ಕಳುವು ಮಾಡಲಾಗಿದೆ. ಬಾಗಲಕೋಟೆ ನಗರದ ಮಾಬೂಬಿ ಮಗು ಕಳೆದುಕೊಂಡ ತಾಯಿಯಾಗಿದ್ದು, ನಿನ್ನೆ ಸಂಜೆ 7 ಗಂಟೆಗೆ ಮಾಬೂಬಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ಅವರ ಎರಡನೇ ಹೆರಿಗೆಯಾಗಿತ್ತು. ಬೆಳಿಗ್ಗೆ ಮಗುವಿಗೆ ಉಸಿರಾಟ ತೊಂದರೆಯಾಗ್ತಿದೆ ಅಂತ ಹೇಳಿ ಮಗುವನ್ನು ಫೇಕ್ ನರ್ಸ್ ಕಳುವು ಮಾಡಿಕೊಂಡು ಹೋಗಿದ್ದಾಳೆ. ಮಗು ಹುಡುಕಾಟಕ್ಕೆ ಕುಟುಂಬದವರು ಮುಂದಾಗಿದ್ದು, ಮಗುವನ್ನು ಕಳೆದುಕೊಂಡ ತಾಯಿ ಮಾಬೂಬಿ ದುಃಖಿಸುತ್ತಿದ್ದಾಳೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಕ್ಕದ ವಾರ್ಡ್ನಲ್ಲಿಯೇ ಮಗು ಇರುವ ಮಾಹಿತಿ ದೊರೆತಿದ್ದು, ಮಗುವಿನ ಸಂಬಂಧಿಕರು ಬೇರೊಬ್ಬ ಮಹಿಳೆ ನಡುವೆ ಗೊಂದಲ ಏರ್ಪಟ್ಟಿದೆ. ಮಾಬೂಬಿ ತಾಯಿ,ತಂಗಿ ಪಕ್ಕದ ವಾರ್ಡಿನಲ್ಲಿರುವ ಮಗು ನಮ್ಮದೇ ಎನ್ನುತ್ತಿದ್ದಾರೆ. ಆದರೇ, ಮಗುವನ್ನ ಎತ್ತಿಕೊಂಡ ಮಹಿಳೆ ಇದು ನಮ್ಮ ಮಗು ಎನ್ನುತ್ತಿದ್ದಾಳೆ. ಇನ್ನು ಮಗುವನ್ನು ತೆಗೆದುಕೊಂಡಿರುವ ಮಹಿಳೆಗೆ ಹೆರಿಗೆಯೇ ಆಗಿಲ್ಲ ಎನ್ನಲಾಗುತ್ತಿದ್ದು, ವಾರ್ಡ್ಗೆ ಡಿಎಸ್ಪಿ ಮಹಾಂತೇಶ್ ಜಿದ್ದಿ ಭೇಟಿ ಪರಿಶೀಲನೆ ನೀಡಿ ಪರಿಶೀಲನೆ ನಡೆಸಿದ್ದಾರೆ.