ಕೇವಲ 2000 ರೂಪಾಯಿಗಾಗಿ ಚಾಕು ಇರಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ ನಗರದ ಕುಂಚನೂರು ಕಾಂಪ್ಲೆಕ್ಸ್ ಬಳಿ ನಡೆದಿದೆ
ಶ್ರೀಧರ್ ಟರ್ಕಿ (39) ಚಾಕು ಇರಿತಕ್ಕೊಳಗಾದ ವ್ಯಕ್ತಿ.
ಕುಮಾರ್ ಬಕರೆ ಚಾಕು ಚುಚ್ಚಿರುವ ವ್ಯಕ್ತಿ.
ವೃತ್ತಿಯಲ್ಲಿ ಕುಮಾರ್ ಬಕರೆ ಟೈಲರ್ ಆಗಿ ಕಾರ್ಯ ಮಾಡುತ್ತಿದ್ದಾನೆ.
ಸದ್ಯ ಆರೋಪಿತ ಕುಮಾರನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರಬಕವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಶ್ರೀಧರ್ ಟರ್ಕಿ ಇನ್ ನ್ಯೂಸ್ ನೊಂದಿಗೆ ಮಾತನಾಡಿ, ಬಕ್ರಿನ ಬಳಿ ಬಟ್ಟೆ ಹೊಲಿಯಲು ಹಾಕಿದ್ದೆ ರೂ. 2000 ಕೊಡುವುದು ಇತ್ತು ಅಂಗಡಿಗೆ ಹೋದಾಗ ವಾಗ್ವಾದ ನಡೆದು ಅವನು ಮತ್ತು ಅವನು ಸ್ನೇಹಿತರು ಸೇರಿ ನನ್ನ ಮೇಲೆ ಹಲ್ಲೆ ಮಾಡಿ ಚಾಕು ಇರಿದರು ಎಂದು ಹೇಳಿದ
