ಮೆಣಸಿನಕಾಯಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಶನಿವಾರದಂದು ಸಂಭವಿಸಿದೆ. ಬೆಳಗಾವಿಯಿಂದ ಹೈದ್ರಾಬಾದ್ ಗೆ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನ ಪಟ್ಟಣದ ಪೆಟ್ರೋಲ್ ಪಂಪ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ
ಮಧ್ಯದ ಡಿವೈಡರ್ ಗೆ ಡಿಕ್ಕಿಯಾಗಿದೆ ಡಿಕ್ಕಿಯಾದ ರಬಸಕ್ಕೆ ವಾಹನ ಪಲ್ಟಿಯಾಗಿದೆ ವಾಹನ ಚಾಲಕನಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಣಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
