Bagalkot

ಆರ್ಡರ್ ಮಾಡಿದ್ದು ಮೈಕ್ರೋಫೋನ್…ಡೆಲ್ಹಿವರಿಯಾಗಿದ್ದು ಇಟ್ಟಿಗೆ!!!

Share

ಆನ್’ಲೈನ್ ಮೈಕ್ರೋಫೋನ್ ಆರ್ಡರ್ ಮಾಡಿದ್ದ ಬಾಗಲಕೋಟೆಯ ನಿವಾಸಿಯೊಬ್ಬರಿಗೆ ಇಟ್ಟಿಗೆ ಡೆಲ್ಹಿವರಿಯಾಗಿದ್ದು, ಸುಮಾರು 14 ಸಾವಿರ ರೂಪಾಯಿ ನೀಡಿ ಆರ್ಡರ್ ಮಾಡಿದ್ದ ಯುವಕ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.

ಬಾಗಲಕೋಟೆ ನವನಗರದ ನಿವಾಸಿ ರಮೇಶ್ ಹಟ್ಟಿ ಅಮೇಜಾನ್ ವೆಬ್‌ಸೈಟ್’ನಲ್ಲಿ ಮೈಕ್ರೋಫೋನ್ ಆರ್ಡರ್ ಮಾಡಿದ್ದರು. ಸುಮಾರು 14,500 ರೂಪಾಯಿ ನೀಡಿ ರಮೇಶ್ ಆರ್ಡರ್ ಮಾಡಿದ್ದರು. ಬಾಕ್ಸ್ ನೋಡಿ ಅನುಮಾನಗೊಂಡ ರಮೇಶ್, ಬಳಿಕ ಡೆಲಿವರಿ ಬಾಯ್ ಕಡೆಯಿಂದಲೇ ಬಾಕ್ಸ್ ಓಪನ್ ಮಾಡಿಸಿದ್ದಾರೆ. ಬಾಕ್ಸ್ ಓಪನ್ ಮಾಡುವ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಕೂಡ ಮಾಡಿದ್ದಾರೆ. ಆದರೇ ಬಾಕ್ಸ್ ಓಪನ್ ಆಗುತ್ತಿದ್ದಂತೆ ಅಚ್ಚರಿ ಮೂಡಿಸಿದೆ. ಬಾಕ್ಸಿನ ಒಳಗಡೆ ಫೋನ್ ಬದಲಿಗೆ ಇಟ್ಟಿಗೆ ಪತ್ತೆಯಾಗಿದೆ. ಈ ಬಗ್ಗೆ ಅಮೇಜಾನ್’ಗೆ ರಮೇಶ್ ದೂರು ನೀಡಿದ್ದಾರೆ. ಹಣ ವಾಪಸ್ ಮಾಡುವುದಾಗಿ ಅಮೇಜಾನ್ ಕಂಪನಿ ತಿಳಿಸಿದೆಯಂತೆ.

Tags:

error: Content is protected !!