ಜಗತ್ತಿನಲ್ಲಿ ಭಾರತದಂತಹ ಶಿಸ್ತು ಮತ್ತು ಸೌಹಾರ್ದತೆ ದೇಶ ಇನ್ನೊಂದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಅನಿವಾರ್ಯ. ಸಂಪೂರ್ಣ ದೇಶ ಒಂದಾಗಿದೆ. ಒಕ್ಕಟ್ಟಿನಿಂದ ಪಾಕಿಸ್ತಾನಕ್ಕೆ ನಾವೆಲ್ಲರೂ ಬುದ್ಧಿ ಕಲಿಸೋಣವೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಇಂದು ಗದಗನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಅನಿವಾರ್ಯ. ಭಾರತ ಸರ್ಕಾರ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾರತದ ಮೇಲೆ ಬಂದರೇ ನಾವು ಸಹಿಸುವುದಿಲ್ಲ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆಂದು ಭಾರತದವರು ಸಂದೇಶವನ್ನು ಕಳುಹಿಸಿದ್ದೇವೆ. ಸಂಪೂರ್ಣ ದೇಶ ಒಂದಾಗಿದೆ. ಒಕ್ಕಟ್ಟಿನಿಂದ ನಾವೆಲ್ಲರೂ ಬುದ್ಧಿ ಕಲಿಸೋಣ. ಜಗತ್ತಿನಲ್ಲಿ ಭಾರತದಂತಹ ಶಿಸ್ತು ಮತ್ತು ಸೌಹಾರ್ದತೆ ದೇಶ ಇನ್ನೊಂದಿಲ್ಲ. ವಾಜಪೇಯಿ ಅವರ ಕಾಲದಲ್ಲಿ ಸೃಷ್ಠಿಯಾದಂತಹ ವಾತಾವರಣ ಸೃಷ್ಠಿಯಾಗಲಿದೆ ಎಂದರು.
ಇನ್ನು ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ 15 ವರ್ಷವಾದರೂ ಯಾಕೆ ಗೆಜೆಟ್ ನೋಟಿಫಿಕೇಷನ್ ಮಾಡುತ್ತಿಲ್ಲ? ಇದನ್ನ ನಾನಷ್ಟೇ ಅಲ್ಲ. ಲೋಕಸಭೆಯಲ್ಲಿ ಸಂಸದ ಬೊಮ್ಮಾಯಿ ಕೂಡ ಪ್ರಸ್ತಾಪಿಸಿದ್ದಾರೆ. 15 ವರ್ಷದಿಂದ ಉತ್ತರ ಕರ್ನಾಟಕದ ಜನರು ನೋವನ್ನು ಸಹಿಸಿಕೊಂಡಿದ್ದಾರೆ. ಪ್ರತಿ ಬಾರಿಯೂ ಕೇವಲ ಆಶ್ವಾಸನೆಗಳೇ ಸಿಗುತ್ತವೆ. ಕೃಷ್ಣಾ ವಿಚಾರದಲ್ಲೂ ಮಾಡಿದ ಅನ್ಯಾಯಕ್ಕೆ ಬೆಲೆ ಕಟ್ಟಬೇಕಾಗುತ್ತದೆ ಎಂದರು.