ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಬಳಿಕ ಬಿಜೆಪಿ ಪಕ್ಷಕ್ಕೆ ಲಾಭ ಆಗಿದೆ ಎಂದು ನಾನೇನು ಹೇಳ್ತಾ ಇಲ್ಲಾ, ಆದ್ರೇ, ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟು ಕಾಣ್ತಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು

ವಿಜಯಪುರ ನಗರದಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಮಾದ್ಯಮಗಳ ಜೊತೆಗೆ ಮಾತನಾಡಿ ನಮ್ಮ ಗುರಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.
ಪಕ್ಷಕ್ಕೆ ಲಾಭ ಆಗಿಲ್ಲ ಎನ್ನೋ ಮೂಲಕ ಯತ್ನಾಳ ಉಚ್ಚಾಟನೆ ಕುರಿತು ಉತ್ತರಿಸಿದರು. ಇನ್ನೂ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಬಗ್ಗೆ ಕಾಳಜಿ ಇಲ್ಲಾ, ಚುನಾವಣೆ ಗೆಲ್ಬೇಕು, ಈ ತರಹ ಬೂಟಾಟಿಕೆ ಮಾಡ್ತಾರೆ, ನಾಲ್ಕು ಗಂಟೆ ಅಲ್ಲ ನಾಲ್ಕು ವರ್ಷ ಆದ್ರೂ ಜಾತಿ ಗಣತಿ ಮಾಡಲು ಸಾಧ್ಯವಿಲ್ಲಾ ಎಂದರು. ಇನ್ನೂ ಜನಾಕ್ರೋಶ ಯಾತ್ರೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಜನತೆ, ಕಾರ್ಯಕರ್ತರು ಸಾತ್ ನೀಡುತ್ತಿದ್ದಾರೆ. ಭ್ರಷ್ಟಾ, ಜನ ವಿರೋಧಿ ವಿರುದ್ಧ ಜನತೆ ಬೀದಿಗೆ ಇಳಿದಿದ್ದಾರೆ, ಸಿಎಂ ಸಿದ್ದರಾಮಯ್ಯ ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಬರಲ್ಲಾ ಎಂದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.