ಬಾಗಲಕೋಟೆಯಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಚರಂತಿಮಠ ಹಾಗೂ ಪೂಜಾರಿ ಬಿಜೆಪಿ ಎರಡೂ ಬಣಗಳ ನಡುವೆ ನಾಯಕರ ಮನವೊಲಿಸುವಲ್ಲಿ ತೀವ್ರ ಪೈಪೋಟಿ ನಡೆಯಿತು

ಬಾಗಲಕೋಟೆಯಲ್ಲಿ ಗುರುವಾರ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ಬಣ ರಾಜಕೀಯ ಜೋರಾಗಿತ್ತು.
ಬಿಜೆಪಿಯ ಎರಡು ಬಣಗಳ ನಡುವೆ ಪೈಪೋಟಿಗೆ ಬಿದ್ದವರಂತೆ ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗುವುದು ಸಾಮಾನ್ಯವಾಗಿತ್ತು ಈ ನಿಟ್ಟಿನಲ್ಲಿ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಬಣಗಳ ನಡುವಿನ ಕಾರ್ಯಕರ್ತರಲ್ಲಿ ತೀವ್ರ ಪೈಪೋಟಿ ನಡೆಯಿತು
ಜನಾಕ್ರೋಶ ಯಾತ್ರೆ ಆರಂಭಕ್ಕೂ ಮೊದಲೇ ಬಿ.ವೈ.ವಿಜಯೇಂದ್ರ ಸ್ವಾಗತಕ್ಕೆ ಎಂ.ಎಲ್.ಸಿ ಪಿ.ಹೆಚ್.ಪೂಜಾರ ಪರ ಬಣ ನಿಂತಿತ್ತು ಇದನ್ನು ಗಮನಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಬಂದರು ಈ ವೇಳೆ ಶಾಂತಗೌಡ ಪಾಟೀಲ್ ಹಾಗೂ ಪೂಜಾರ್ ಪರ ಕೆಲ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು ನಂತರ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಬಣ ತೆರಳಿದಾಗ
ಮೊದಲೇ ಅಲ್ಲಿದ್ದ ಚರಂತಿಮಠ ಅವರ ಬಣದ ಕಾರ್ಯಕರ್ತರಿಂದ ಚರಂತಿಮಠ ಅವರ ಪರವಾಗಿ ಘೋಷಣೆ ಕೂಗಲಾಯಿತು ಹೀಗೆ ಎರಡೂ ಬಣಗಳ ಕಾರ್ಯಕರ್ತರು ತಮ್ಮ ತಮ್ಮ ನಾಯಕರ ಪರ ಪೈಪೋಟಿಗೆ ಬಿದ್ದವರಂತೆ ಘೋಷಣೆ ಕೂಗಿ ಬಲಪ್ರದರ್ಶನ ಮಾಡಿದರು.
ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಬಂದ ಬಳಿಕ, ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದರು.